20ರಿಂದ ಉಚಿತ ಚಿಕತ್ಸೆ ಶಿಬಿರ

vijayavani logo
Police gangster rule in the state
Published on

ವಿಜಯಪುರ: ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದಲ್ಲಿ ಜ. 20 ರಿಂದ 25 ರವರೆಗೆ ಉಚಿತ ಅಪೌಷ್ಟಿಕತೆ / ಕಾರ್ಶ್ಯ (ಅಂಡರ್​ವೇಟ್​) ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಶಿಬಿರ ನಡೆಯಲಿದೆ.

ಸಾಮಾನ್ಯ ಲಣಗಳಾದ ಕಡಿಮೆ ದೇಹದ ತೂಕ, ತೆಳುವಾದ ತೋಳುಗಳು ಮತ್ತು ಕಾಲುಗಳು, ಆಯಾಸ, ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತ ಮುಂತಾದ ಅಪೌಷ್ಟಿಕತೆಯ ತೊಂದರೆಗಳಿಂದ ಬಳಲುವ ಮಕ್ಕಳಿಗೆ ಈ ಶಿಬಿರದಲ್ಲಿ ಅರೋಗ್ಯ ಉಚಿತ ತಪಾಸಣೆ, ಮಾಪನ (ತೂಕ, ಎತ್ತರ, ಬಿಎಂಐ, ಸ್ಕಿನ್​, ಥಿಕ್​ನೆಸ್​) ಮುಂತಾದ ತಪಾಸಣೆ ಮತ್ತು ಉಚಿತ ಔಷಧ ನೀಡಲಾಗುವುದು.

ಪ್ರತಿದಿನ ದಿನ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ತಪಾಸಣೆ ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ಪೂರ್ವ ನೋಂದಣಿಗಾಗಿ ಡಾ. ದೌಲಬಿ ಚೌಧರಿ ಮೊ. 8197378138ಕ್ಕೆ ಸಂಪರ್ಕಿಸುವಂತೆ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net