ಅಗ್ನಿವೀರ್ ಸೇನಾ ರ‌್ಯಾಲಿಯ ಅಭ್ಯರ್ಥಿಗಳಿಗೆ ಉಚಿತ ಊಟ

raichur
raichur
Published on

ರಾಯಚೂರು ನಗರದಲ್ಲಿ ಆ.8 ರಿಂದ ಪ್ರಾರಂಬವಾಗಿರುವ ಅಗ್ನಿವೀರ್ ಸೇನಾ ರ‌್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗಾಗಿ ನಗರದ ಡ್ಯಾಡಿ (ಗಣೇಶ) ಕಾಲೋನಿಯ ಶ್ರೀ ಈಶ್ವರ ದೇವಸ್ಥಾನ ಸಮಿತಿಯಿಂದ ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದೆ.

ಆ.8 ರಿಂದ 26ರವರೆಗೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ದ್ವಾರದ ಹತ್ತಿರ ಮಾಡಲಾಗಿದೆ. ಈ ಹಿಂದೆ 2017ರಲ್ಲಿ ನಗರದಲ್ಲಿ ನಡೆದ ಸೇನಾ ಭರ್ತಿ ರ‌್ಯಾಲಿಯಲ್ಲಿ ಸಹ ಶ್ರೀ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಎಲ್ಲ ಅಭ್ಯರ್ಥಿ ಗಳಿಗೆ ಉಚಿತ ಉಪಹಾರ ಮತ್ತು ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವರ್ಷವೂ ಸಹ ಅನ್ನಸಂತರ್ಪಣೆ ಮಾಡಲಾಗಿದೆ.

ಉತ್ತಮ ಗುಣಮಟ್ಟದ ಅಡಿಕೆ ಪತ್ರೋಳಿಯನ್ನು ಊಟಕ್ಕೆ ಬಳಸಲಾಗುತ್ತಿದೆ. ಈ ಸೇವಾ ಕಾರ್ಯಕರ್ತರು ಅನ್ನಸಂತರ್ಪಣೆ ಸೇವೆಗಾಗಿ ಸತತ ನಾಲ್ಕು ಗಂಟೆ ಸಮಯ ಮೀಸಲಿಟ್ಟಿ ದ್ದಾರೆ. ಪ್ರತಿ ವರ್ಷವೂ ಈಶ್ವರ ದೇವಸ್ಥಾನ ಸಮಿತಿಯಿಂದ ಯುಗಾದಿ ಹಬ್ಬದ ಸಂದರ್ಭದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ಜಾತ್ರೆಗೆ ಹೋಗುವ ಮತ್ತು ಬರುವ ಭಕ್ತರಿಗೆ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆಂದು ಶ್ರೀ ಈಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net