ಉಚಿತ ಹೆರಿಗೆ ಸೇವೆಗೆ ಚಾಲನೆ ಇಂದು

13blh15 prabhu neelakanth swamiji birth day news
Published on

ಬೈಲಹೊಂಗಲ: ನಗರದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆ ಅಧ್ಯರು, ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ 32ನೇ ಜನ್ಮದಿನದ ಪ್ರಯುಕ್ತ ಅ.14ರಂದು ಬೆಳಗ್ಗೆ 11 ಗಂಟೆಗೆ ಮಾತೃ ವಾತ್ಸಲ್ಯ ಕಾರ್ಯಕ್ರಮದಡಿ ಎಸ್​ಜಿವಿ ಈಶಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 100 ಉಚಿತ ಹೆರಿಗೆ ಸೇವೆಗೆ ಚಾಲನೆ ದೊರೆಯಲಿದ್ದು, ೆ.26 ವರೆಗೆ ನಡೆಯಲಿದೆ. ಬೈಲಹೊಂಗಲ ಸೇರಿ ವಿವಿಧ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗಳ ಆಶಯದಂತೆ ನುರಿತ ತ ವೈದ್ಯರಿಂದ ಹೆರಿಗೆ ನಡೆಯಲಿದೆ. ಆಸಕ್ತ ಗರ್ಭಿಣಿಯರು ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಪ್ರಾಚಾರ್ಯ ಡಾ.ಸುಭಾಸ ಬಾಗಡೆ, ಡಾ.ನಾಗೇಂದ್ರ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net