ಉಚಿತ ಸಾಮೂಹಿಕ ವಿವಾಹಕ್ಕೆ ಸಿದ್ಧತೆ

22
ಹುಕ್ಕೇರಿ ತಾಲೂಕು ಗಂಗಾಮತಸ್ಥ ಸಮುದಾಯದ ತಾಲೂಕು ಅಧ್ಯಕ್ಷ ಕಿಶೋರ ಶಿರಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಶೋಕ ಪಾಟೀಲ, ಮಹಾದೇವ ಗೋಣಿ, ರಾಜು ಕುರಂದವಾಡೆ ಇತರರಿದ್ದರು.
Published on

ಹುಕ್ಕೇರಿ: ಪಟ್ಟಣದ ಎಸ್.ಎಸ್.ಕನ್ವೆನ್ಶನಲ್ ಹಾಲ್‌ನಲ್ಲಿ ಡಿ. 4ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿ ತಾಲೂಕು ಗಂಗಾಮತ ಸಮುದಾಯದ ಅಧ್ಯಕ್ಷ ಕಿಶೋರ ಶಿರಗೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಂದವಾಡೆ ಸಹೋದರರು ನಿರ್ಮಿಸಿದ ಕನ್ವೆನ್ಶನಲ್ ಹಾಲ್ ಉದ್ಘಾಟನೆ ಜತೆಗೆ ಸಮಾಜಮುಖಿಯಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಗ್ರಾಮೀಣರ ಅನುಕೂಲಕ್ಕಾಗಿ ದಿಲೀಪ ಮತ್ತು ರಾಜು ಕುರಂದವಾಡೆ ಸೋದರರು ಅವರ ತಂದೆ, ತಾಯಿ ಸ್ಮರಣಾರ್ಥ ಹಾಗೂ ಹುಕ್ಕೇರಿ ಜನರ ಅನುಕೂಲಕ್ಕಾಗಿ ಹುಕ್ಕೇರಿ-ಸಂಕೇಶ್ವರ ರಸ್ತೆ ಪಕ್ಕದಲ್ಲಿ ಎಸ್.ಎಸ್.ಕಲ್ಯಾಣ ಮಂಟಪ ನಿರ್ಮಿಸಿದು,್ದ ಸಾರ್ವಜನಿಕರ ಸಮಾರಂಭಗಳಿಗೆ ಬಹುಉಪಯುಕ್ತವಾಗಿದೆ ಎಂದರು.

ಗಂಗಾಮತ ಸಮುದಾಯದ ಮಾಜಿ ಅಧ್ಯಕ್ಷ ಮಹಾದೇವ ಗೋಣಿ, ಬಸವರಾಜ ಕುರಂದವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net