ಮಂಗಳಮುಖಿಯಿAದ ಉಚಿತ ಸಾಮೂಹಿಕ ವಿವಾಹ

SINDANUR
ಮಂಗಳಮುಖಿಯಿAದ ಉಚಿತ ಸಾಮೂಹಿಕ ವಿವಾಹ
Published on

ಸಿಂಧನೂರು ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ತಾಲೂಕಿನಲ್ಲಿ ಮಂಗಳಮುಖಿಯೊಬ್ಬರು ಪ್ರತಿ ವರ್ಷವೂ ತಮ್ಮ ಸ್ವಂತ ಹಣದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದವರಾದ ಜಮುನಾ, ಸಿಂಧನೂರಿನಲ್ಲಿಯೇ ವಾಸಿಸುತ್ತಾರೆ. ಪ್ರತಿ ವರ್ಷ ಬಡ ಕುಟುಂಬಗಳನ್ನು ಗುರುತಿಸಿ, ಇಬ್ಬರು ದಂಪತಿಗಳು ಮದುವೆಗೆ ಬೇಕಾದ ಮಾಂಗಲ್ಯ, ಕಾಲುಂಗರ, ಬಟ್ಟೆಗಳು ಸೇರಿದಂತೆ ಎಲ್ಲವನ್ನು ಉಚಿತವಾಗಿ ನೀಡುವ ಮೂಲಕ ನವದಂಪತಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಮದುವೆಯಾಗುವ ದಂಪತಿಗಳ ಕುಟುಂಬದಿAದ ಯಾವುದೇ ರೀತಿಯ ಹಣವನ್ನು ಪಡೆಯದೆ ಅನ್ನದಾಸೋಹದಿಂದ ಹಿಡಿದು ಎಲ್ಲವನ್ನು ಉಚಿತವಾಗಿ ಮುಂದೆ ನಿಂತು ಮಂಗಳಮುಖಿಯರೇ ಮದುವೆ ಮಾಡುತ್ತಿರುವುದು ಗಮನಾರ್ಹವಾಗಿದೆ.

ತಾಲೂಕಿನ ಹೊಸಳ್ಳಿಕ್ಯಾಂಪ್‌ನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಐದು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಜರುಗಿತು. ಈ ಮದುವೆಗಳನ್ನು ಮಂಗಳಮುಖಿ ಜಮುನಾ ಅವರೇ ಮುಂದೆನಿAತು ಮಾಡಿಕೊಟ್ಟರು. ವೆಂಕಟಗಿರಿಕ್ಯಾAಪ್ ಸಿದ್ದಾಶ್ರಮದ ಸದಾನಂದ ಶರಣರು ಹಾಗು ವಧು-ವರನ ಕಡೆಯ ಕುಟುಂಬದವರು ಮದುವೆಗೆ ಸಾಕ್ಷಿಯಾಗಿ, ಶುಭಹಾರೈಸಿದರು. ಪ್ರತಿ ವರ್ಷವು ಕೈಲಾದಷ್ಟು ಸಾಮೂಹಿಕ ವಿವಾಹ ಮಾಡುವ ಮಂಗಳಮುಖಿ ಜಮುನಾ, ಮಾದರಿ ಕಾರ್ಯವನ್ನು ಮಾಡುತ್ತಿದ್ದಾರೆ.

------------

ಕೋಟ್

------------

ಸಮಾಜದಲ್ಲಿ ಕಷ್ಟದಲ್ಲಿ ಇದ್ದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಭಾವನೆ ನನ್ನದು. ನಾವಂತು ಮದುವೆ ಮಾಡಿಕೊಳ್ಳಲಿಕ್ಕೆ ಆಗಲ್ಲ. ಆದರೆ ಬಡ ಕುಟುಂಬದವರ ಮದುವೆಯನ್ನು ಉಚಿತವಾಗಿ ಮಾಡಿಕೊಡುತ್ತಿದ್ದೇವೆ. ಭಿಕ್ಷೆ ಬೇಡಿ ಉಳಿದ ಹಣದಲ್ಲಿಯೇ ಸಮಾಜಸೇವೆ ಮಾಡುತ್ತಿದ್ದೇನೆ.

ಜಮುನಾ, ಮಂಗಳಮುಖಿ, ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net