95 ಅಂಗವಿಕಲರಿಗೆ ಉಚಿತವಾಗಿ ಕೈ, ಕಾಲು ಜೋಡಣೆಗೆ ಸಿದ್ಧತೆ

Free Limbs Camp
Published on

ಕಾರವಾರ: ಉತ್ತರ ಕನ್ನಡದ ಎಲ್ಲ ರೋಟರಿ ಕ್ಲಬ್‌ಗಳಿಂದ ಇಲ್ಲಿನ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕೃತಕ ಕೈ, ಕಾಲು ಜೋಡಣಾ ಶಿಬಿರದಲ್ಲಿ 95 ಶಿಬಿರಾರ್ಥಿಗಳ ಶರೀರದ ಅಳತೆ ಪಡೆಯಲಾಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ 127 ಶಿಬಿರಾರ್ಥಿಗಳು ಆಗಮಿಸಿದ್ದರು. ಹಾಗೂ ರೋಟರಿ ಕ್ಲಬ್ ಇಚಲಕರಂಜಿ ಟೆಕ್ಸಟೈಲ್ ಸಿಟಿ ನೆರವಿನಲ್ಲಿ ಪುಣೆಯ ಸಾಧು ವಾಸ್ವಾನಿ ಟ್ರಸ್ಟ್ನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಕೃತಕ ಕೈ, ಕಾಲುಗಳನ್ನು ಜೋಡಿಸಲು ಅಗ್ಯ ಅಳತೆ ಪಡೆದುಕೊಂಡರು.
 ಮೆರ್ಕ್ಯುರಿ ಶಿಪ್ ರಿಪೇರ್ ಪ್ರೈ.ಲಿ, ಕೆನರಾ ಡಿಸಿಸಿ ಬ್ಯಾಂಕ್ ಶಿರಸಿ, ಸೈಂಟ್ ಮಿಲಾಗ್ರಿಸ್ ಬ್ಯಾಂಕ್, ಹೆಬ್ಬಾರ್ ಚಾರಿಟೇಬಲ್ ಫೌಂಡೇಶನ್ ಯಲ್ಲಾಪುರ, ಸುಬ್ರಾಯ ಎಚ್. ವಾಳ್ಕೆ ಕುಮಟಾ ಸಹಭಾಗಿತ್ವ ನೀಡಿದ್ದರು.


ಶಾಸಕ ಸತೀಶ ಸೈಲ್, ಪಿ. ವಿ. ಪ್ರಜಿತ್, ಸಾಧು ವಾಸ್ವಾನಿ ಮಿಷನ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಮಿಲಿಂದ್ ಜಾಧವ, ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷ ಜೋಸೆಫ್ ಗೊಂಸಾಲ್ವಿಸ್, ಕಾರವಾರ ಸೀಸೈಟ್ ಕಾರ್ಯದರ್ಶಿ ಕಿರಣ ಮೋಹನ್,ರೋಟರಿ ಕಾರವಾರಪಶ್ಚಿಮದ ಕಾರ್ಯದರ್ಶಿ ಡಾಲ್‌ರಿಚ್ ಫರ್ನಾಂಡಿಸ್,ಅಂಕೋಲಾ ರೋಟರಿ ಕ್ಲಬ್‌ನ ಡಾ.ಸಂಜು ನಾಯಕ, ಕಾರವಾರ ಕ್ಲಬ್‌ನ ಗುರುದತ್ತ ಬಂಟ ಉಪಸ್ಥಿತರಿದ್ದರು. ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಡಾ.ಸಮೀರ. ಟಿ.ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಗುರುರಾಜ ಭಟ್ ವಂದಿಸಿದರು. ಶೈಲೇಶ್ ಹಳದೀಪುರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net