ಎಲ್ಲರಿಗೂ ಉಚಿತ ಕಾನೂನು ನೆರವು ಸಿಗಲಿ: ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎ.ನಾಗೇಶ ಹೇಳಿಕೆ

241020 Kudligi Lawyers Free Training Programme
ಕೂಡ್ಲಿಗಿಯ ಕೋರ್ಟ್ ಆವರಣದಲ್ಲಿ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಿಗೆ ಶನಿವಾರ ತರಬೇತಿ ಕಾರ್ಯಾಗಾರ ನಡೆಯಿತು.
Published on

ಕೂಡ್ಲಿಗಿ: ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಕಾನೂನಿನ ಅರಿವು ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎ.ನಾಗೇಶ ಹೇಳಿದರು. ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಪ್ಯಾನಲ್ ವಕೀಲರು ಶನಿವಾರ ಅರೆ ಕಾಲಿಕ ಕಾನೂನು ಸ್ವಯಂ ಸೇವಕರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಲವಾರು ಪ್ರಕರಣಗಳಲ್ಲಿ ಹಣಕಾಸಿನ ಸಮಸ್ಯೆ ಹಾಗೂ ಮಾಹಿತಿ ಕೊರತೆಗಳಿಂದ ವ್ಯಕ್ತಿ ನ್ಯಾಯ ಪಡೆಯಲು ಹಿನ್ನಡೆಯಾಗುತ್ತದೆ. ಆಕಾರಣಕ್ಕೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಎಲ್ಲರಿಗೂ ಉಚಿತ ಕಾನೂನು ಅರಿವು ನೆರವು ಸಿಗಲೆಂದು ಜಿಲ್ಲೆ ಹಾಗೂ ತಾಲೂಕಿನಲ್ಲಿ ಕಾನೂನು ಪ್ರಾಧಿಕಾರ ರಚಿಸಿದ್ದು, ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಿರಿಯ ಶ್ರೇಣಿ ನ್ಯಾಯಾಧೀಶ ಮುರುಗೇಂದ್ರ ತುಬಾಕೆ ಮಾತನಾಡಿ, ಸಮಾಜದಲ್ಲಿ ಎಲ್ಲ ಸ್ಥರಗಳಲ್ಲಿ ದೌರ್ಜನ್ಯ, ವಂಚನೆ ನಡೆಯುತ್ತಿದೆ. ಆದರೆ ಬಹುತೇಕರು ಅರಿವಿಲ್ಲದೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ನ್ಯಾಯ ಕೇಳಲು ಹಿಂದೇಟು ಹಾಕುತಿದ್ದಾರೆ. ಇದನ್ನು ಮನಗಂಡು ಸಮಾಜದ ಎಲ್ಲ ವರ್ಗಗಳಲ್ಲೂ ಉಚಿತ ಕಾನೂನಿನ ಅರಿವು ನೆರವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಸ್ವಯಂ ಸೇವಕರು ತರಬೇತಿ ಪಡೆದು ಜನರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಪ್ಯಾನಲ್ ವಕೀಲರಾದ ಸಿ.ವಿರೂಪಾಕ್ಷಪ್ಪ, ಕೆ.ಎಚ್.ಎಂ.ಶೈಲಜಾ, ಜಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಸಿದ್ದಲಿಂಗಪ್ಪ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಮ್ಮ, ಮಹಾಂತಮ್ಮ, ಸಿ.ಶೋಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net