ಎಚ್.ಎನ್.ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಡಿಜಿನ್ ಕಂಪನಿಯ ಉಚಿತ ಲ್ಯಾಪ್‌ಟಾಪ್

HN
Published on

ಬೆಂಗಳೂರು: ಜಯನಗರದ ಎಚ್.ಎನ್.ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಡಿಜಿನ್ ಲಿಮಿಟೆಡ್ ಕಂಪನಿಯಿಂದ 110 ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಂಡಿಜಿನ್ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್ ಫಂಡ್) ಯಿಂದ ಈ ಲ್ಯಾಪ್‌ಟಾಪ್‌ಗಳನ್ನು ವಿತರಿಸಿತು.

ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಇಂಡಿಜಿನ್ ಸಹಸಂಸ್ಥಾಪಕ ಆನಂದ್ ಕಿರಣ್, ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ಹಿಂದೆಯೂ ನಾವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ್ದೇವೆ. ಮುಂದೆಯೂ ಕಾಲೇಜಿಗೆ ಬೆಂಬಲ, ಸಹಕಾರ ನೀಡಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಮಣ್ಯ, ಕಾಲೇಜಿನ ಚೇರ್ಮನ್‌ಗಳಾದ ವಿ.ವೆಂಕಟಶಿವಾರೆಡ್ಡಿ, ಡಾ. ಪಿ.ಎಲ್.ವೆಂಕಟರಾಮ ರೆಡ್ಡಿ, ಕೋಶಾಧಿಕಾರಿ ತಲ್ಲಮ್ ಆರ್.ದ್ವಾರಕನಾಥ್, ಎಚ್.ಎನ್.ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಡಿ.ಜಯದೇವಪ್ಪ, ಜಯನಗರ ನ್ಯಾಷನಲ್ ಕಾಲೇಜು ಪ್ರಾಂಶುಪಾಲ ಡಾ.ಪಿ.ಎಲ್.ರಮೇಶ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net