

ಕಿನ್ನಿಗೋಳಿ: ಕರಕುಶಲಕರ್ಮಿಗಳಿಗೆ ಆರ್ಥಿಕ, ಕೌಶಲ ತರಬೇತಿ ಮತ್ತು ಮಾರುಕಟ್ಟೆ ಬೆಂಬಲ ಒದಗಿಸುವ ನಿಟಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದು ದೇಶಾದ್ಯಂತ ಲಕ್ಷಾಂತರ ಜನ ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಅಂಚೆ ಕಚೇರಿಯಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಉಚಿತ ಕಿಟ್ ವಿತರಿಸಿ ಮಾತನಾಡಿದರು.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಮಾತಾನಾಡಿ, ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಉಚಿತ ಕಿಟ್ ವಿತರಣೆ ಅಂಚೆ ಇಲಾಖೆ ಮೂಲಕ ಬರುತ್ತಿದ್ದು, ಸುಮಾರು 1500 ಕಿಟ್‌ಗಳು ಇದುವರೆಗೆ ಬಂದಿವೆ. ಇನ್ನೂ ಹಲವು ಮಂದಿಗೆ ಕಿಟ್ ಬರಲಿದೆ, ಕೇಂದ್ರ ಸರ್ಕಾರ ಅತ್ಯುತ್ತಮ ಯೋಜನೆ ಇದಾಗಿದೆ ಎಂದರು.
ಪೋಸ್ಟ್ ಮಾಸ್ಟರ್ ಹರಿಣಿ, ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ ಕಟೀಲು, ದೇವಪ್ರಸಾದ್ ಪುನರೂರು, ಸ್ಟಾೃನಿ ಪಿಂಟೋ, ಯೋಜನೆ ಫಲಾನುಭವಿಗಳು ಉಪಸ್ಥಿತರಿದ್ದರು.