

ಮೈಸೂರು: ನಗರದ ಕೇವಲಿನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನು ಹೋಮಿಯೋಪತಿ ಕ್ಲಿನಿಕ್ ಸಹಯೋಗದಲ್ಲಿ ಅಂಗವಿಕಲ ಮಕ್ಕಳಿಗೆ ಉಚಿತ ಹೋಮಿಯೋಪತಿ ಚಿಕಿತ್ಸೆ ಮತ್ತು ಔಷಧ ನೀಡಲಾಗುವುದು.
ಮೇ 13 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೇಟಗಳ್ಳಿಯ ಕೆಆರ್‌ಎಸ್ ರಸ್ತೆಯಲ್ಲಿರುವ ಎನ್.ರಂಗರಾವ್ ಸ್ಮಾರಕ ಅಂಗವಿಕಲರ ಶಾಲೆಯಲ್ಲಿ ಶಿಬಿರ ನಡೆಯಲಿದೆ. ಡಾ.ಎಂ.ಸಿ.ಮನೋಹರ ಮತ್ತು ಅವರ ಸಹಾಯಕ ವೈದ್ಯರ ತಂಡ ತಪಾಸಣೆ ನಡೆಸಲಿದೆ.
ಮಿದುಳು ಸಂಬಂಧಿ ತೊಂದರೆಗಳಾದ ಬುದ್ಧಿಮಾಂದ್ಯತೆ, ಆಟಿಸಂ, ಸೆರೆಬ್ರಲ್ ಪಾಲ್ಸಿ ಮತ್ತು ಮೂರ್ಚೆ ರೋಗಗಳಿಂದ ಬಳಲುತ್ತಿರುವ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಮಾಹಿತಿಗಾಗಿ ಮೊ: 8431581823 ಸಂಪರ್ಕಿಸಬಹುದು ಎಂದು ಡಾ.ಎಂ.ಸಿ.ಮನೋಹರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.