ಮಕ್ಕಳಿಗೆ ಉಚಿತ ಹೋಮಿಯೋಪತಿ ಚಿಕಿತ್ಸೆ

Helth
Published on

ಮೈಸೂರು: ಮನು ಹೋಮಿಯೋಪಥಿ ಕ್ಲಿನಿಕ್ ಸಹಯೋಗದಲ್ಲಿ ಕೇವಲಿನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೇ 14 ರಂದು ಟ್ರಸ್ಟ್‌ನಲ್ಲಿ ಮಕ್ಕಳ ಮಿದುಳು ಸಂಬಂಧಿ ತೊಂದರೆಗಳಾದ ಬುದ್ಧಿಮಾಂದ್ಯತೆ, ಆಟಿಸಂ, ಸೆರೆಬ್ರಲ್ ಪಾಲ್ಸಿ ಮತ್ತು ಮೂರ್ಛೆ ರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಹೋಮಿಯೋಪತಿ ಚಿಕಿತ್ಸೆ ಮತ್ತು ಔಷಧ ನೀಡಲಾಗುತ್ತದೆ. ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ.

ಡಾ.ಎಂ.ಸಿ.ಮನೋಹರ ಮತ್ತು ಅವರ ಸಹಾಯಕ ವೈದ್ಯರ ತಂಡ ತಪಾಸಣೆ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ: 9886457987 ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net