ನಿರಾಶ್ರಿತ ಅಂಗವಿಕಲನಿಗೆ ಮನೆ ಹಸ್ತಾಂತರ

IMG-20250326-WA0016
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಬುಧವಾರ ನಿರಾಶ್ರಿತ ಅಂಗವಿಕಲ ರವಿ ಎಂಬವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ 2.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವ ಮನೆಯನ್ನು ಪ್ರಮುಖರ ಸಮ್ಮುಖ ಬುಧವಾರ ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಪಾಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆದರ್ಶ, ಧರ್ಮಸ್ಥಳ ಸಂಘದ ಜನೋಪಯೋಗಿ ಕಾರ್ಯಗಳಿಗೆ ಗ್ರಾಮ ಪಂಚಾಯತಿಯೂ ಕೈ ಜೋಡಿಸಲಿದೆ ಎಂದರು. ಗ್ರಾಮದಲ್ಲಿರುವ ಇನ್ನಷ್ಟು ನಿರಾಶ್ರಿತರ ಬದುಕನ್ನು ಸುಧಾರಿಸುವ ಕೆಲಸ ಸಂಸ್ಥೆಯಿಂದ ಆಗಲಿ ಎಂದು ಹಾರೈಸಿದರು.ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತಾಯ ಮಾತನಾಡಿ, ನೊಂದವರು ಹಾಗೂ ಅಸಹಾಯಕರ ನೋವಿಗೆ ಸ್ಪಂದಿಸಿ, ಅವರನ್ನು ಶಕ್ತರನ್ನಾಗಿಸುವುದೇಯೋಜನೆಯ ಧ್ಯೇಯವಾಗಿದೆ ಎಂದರು. ಗ್ರಾಮದಲ್ಲಿ ಅನಾರೋಗ್ಯ ಪೀಡಿತರೊಬ್ಬರಿಗೆ ಇದೇ ಸಂದರ್ಭ 10, 000 ರೂ. ವೆಚ್ಚದ ವಾಟರ್ ಬೆಡ್ ನೀಡಲಾಯಿತು.

ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗಣಪತಿ ಭಟ್, ವಲಯ ಮೇಲ್ವಿಚಾರಕಿ ಅಶ್ವಿನಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಕುಂತಲಾ, ಸೇವಾ ಪ್ರತಿನಿಧಿ ಹರ್ಷಿತಾ, ಗ್ರಾಪಂ ಉಪಾಧ್ಯಕ್ಷೆ ಅಶಾ, ಸದಸ್ಯೆ ರೇಖಾ, ಮುಖಂಡರಾದ ಮಂಜುನಾಥ್, ಶಿವಣ್ಣ, ಗಾಯತ್ರಿ,ಕೆ.ಶೆಟ್ಟಹಳ್ಳಿ ಅಪ್ಪಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net