ಎಚ್​ಐವಿ ಉಚಿತ ತಪಾಸಣೆ, ಚಿಕಿತ್ಸೆ

Free HIV testing, treatment
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿಶೇಷ ಬಾಧಿತರ ಬೆಂಬಲ ಸಭೆಯನ್ನು ಡಾ. ಸಂಪತ್​ ಗುಣಾರಿ ಉದ್ಘಾಟಿಸಿದರು. ಸಿಸ್ಟರ್​ ಜಯಾ ಮೇರಿ, ನಾಮದೇವ ಚವ್ಹಾಣ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಚ್​ಐವಿ ತಪಾಸಣೆಯನ್ನು ಉಚಿತವಾಗಿ ಪರೀಕ್ಷಿಸುವ ಜತೆಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್​ ಗುಣಾರಿ ಹೇಳಿದರು.

ಇಲ್ಲಿನ ಸ್ಟೇಶನ್​ ರಸ್ತೆಯ ಮುಕುಂದ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯಲ್ಲಿ ಸಂತ ಜೋಸೆಫ್​ ಸಮುದಾಯ ಮತ್ತು ಆರೋಗ್ಯ ಕೇಂದ್ರ ಹಾಗೂ ವೀಣಾಧರಿ ಚೇತನ ವಿಶೇಷ ಬಾಧಿತರ ಒಕ್ಕೂಟದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ವಿಶೇಷ ಬಾಧಿತರ ಬೆಂಬಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ಎಚ್​ಐವಿ ಸೋಂಕಿತರ ಹಿತದೃಷ್ಟಿಯಿಂದ ಪ್ರತಿ ತಿಂಗಳು ದುಬಾರಿ ವೆಚ್ಚದ ಎಆರ್​ಟಿ ಮಾತ್ರೆಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಈ ಸೌಲಭ್ಯದ ಸದುಪಯೋಗ ಪಡೆಯಬೇಕು.

ಲ್ಲದೆ, ಈ ಸೊಂಕಿನಿಂದ ಬಳಲುತ್ತಿರುವವರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸುವ ಜತೆಗೆ ನಿತ್ಯವೂ ತಪ್ಪದೇ ಮಾತ್ರೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಅತಿಥಿ ತಾಲೂಕು ಅಧಿಕಾರಿ ನಾಮದೇವ ಚವ್ಹಾಣ ಮಾತನಾಡಿದರು. ನಂತರ ಸಂಸ್ಥೆ ವತಿಯಿಂದ ಡಾ. ಸಂಪತ್​ ಗುಣಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಿಸ್ಟರ್​ ಜಯಾ ಮೇರಿ, ಶೈಲಾ ರೂಗಿ, 80ಕ್ಕೂ ಅಧಿಕ ಎಚ್​ಐವಿ ಬಾಧಿತರು ಭಾಗಿಯಾಗಿದ್ದರು. ಸುನಿತಾ ಮೊರೆ ಸ್ವಾಗತಿಸಿದರು. ಶೃತಿ ನೀಡೊಣಿ ನಿರೂಪಿಸಿದರು. ಕರಿಷ್ಮಾ ಸಿಂದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net