

ರಾಯಚೂರು ಸ್ಪರ್ಶ ಆಸ್ಪತ್ರೆ ವತಿಯಿಂದ ಜು.24 ರಂದು ಸಾರ್ವಜನಿಕರಿಗೆ ಉಚಿತವಾಗಿ ಇಸಿಜಿ ಹಾಗೂ ಹೃದಯರೋಗ ತಪಾಸಣೆ ಮಾಡಲಾಗುತ್ತದೆಂದು ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ರಾಜಶೇಖರ ಪಾಟೀಲ್ ಮುಷ್ಟುರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತಿದ್ದು, ಚಿಕ್ಕಮಕ್ಕಳಲ್ಲಿಯೂ ಹೃದಯರೋಗಗಳು ಕಂಡುಬರುತ್ತಿವೆ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ. ಆದರಿಂದ ನಮ್ಮ ಆಸ್ಪತ್ರೆಯಲ್ಲಿ ಅಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1:30 ರವರೆ ಉಚಿತವಾಗಿ ಇಸಿಜಿ ಹಾಗೂ ಹೃದಯರೋಗ ತಪಾಸಣೆಯನ್ನು ಖ್ಯಾತ ಹೃದಯರೋಗ ತಜ್ಞ ಡಾ.ನಿಖಿಲ್ ಶಾ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿ.ಎಸ್.ಗೌಡ, ಮಲಕಪ್ಪಗೌಡ, ವೀರೇಶ, ಮಲ್ಲೇಶ ಇದ್ದರು.