ದಾಂಡೇಲಿಯಲ್ಲಿ ಉಚಿತ ಹೃದ್ರೋಗ ತಪಾಸಣೆ ಶಿಬಿರ 11ರಂದು

06DND1 HELTH CAMP
Published on

ದಾಂಡೇಲಿ: ಸ್ಥಳೀಯ ಡಾ. ಜಿ.ವಿ. ಭಟ್ ಹಾಸ್ಪಿಟಲ್, ಹುಬ್ಬಳ್ಳಿಯ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಲಯನ್ಸ್ ಕ್ಲಬ್ ದಾಂಡೇಲಿ ಸಿಟಿ ಹಾಗೂ ಕೆಎಲ್​ಇ ನರ್ಸಿಂಗ್ ಕಾಲೇಜ್ ಆಶ್ರಯದಲ್ಲಿ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಆ. 11ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್​ನ ಹಿರಿಯ ಸದಸ್ಯ ಶಿಬಿರದ ಸಂಯೋಜಕ ಯು.ಎಸ್. ಪಾಟೀಲ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಶಿಬಿರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಗರದ ಖ್ಯಾತ ಹೃದ್ರೋಗ ತಜ್ಞ ಡಾ. ಜಿ.ವಿ. ಭಟ್ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಸರಿಯಿಲ್ಲ. ಹೃದಯ ಭಾಗದ ನೋವು, ಬೆನ್ನು ನೋವು ಲಕ್ಷಣ ಕಂಡು ಬಂದರೆ ಕೂಡಲೆ ಮುಂಜಾಗ್ರತೆ ಕ್ರಮವಾಗಿ ಹೃದ್ರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಹುಬ್ಬಳ್ಳಿಯ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಕೇಶವ ರಂಗಾಪುರ ಮಾತನಾಡಿ, ಶಿಬಿರದಲ್ಲಿ ತಪಾಸಣೆ ಸಂಪೂರ್ಣ ಉಚಿತವಿದೆ ಎಂದರು.
ಹುಬ್ಬಳ್ಳಿ ವಿಹಾನ ಆಸ್ಪತ್ರೆ ವೈದ್ಯರಾದ ಡಾ. ಬಸವರಾಜ ಬಾಲಿ, ಲಯನ್ಸ್ ಕ್ಲಬ್​ನ ಜೋನ್ ಚೇರ್ಮನ್ ಸೈಯ್ಯದ್ ತಂಗಳ, ದಾಂಡೇಲಿ ಲಯನ್ಸ್ ಕಾರ್ಯದರ್ಶಿ ಡಾ. ನಾಸೀರ್ ಅಹ್ಮದ್ ಜಂಗೂಬಾಯಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net