ಸೆ.24 ರಂದು ಉಚಿತ ಶ್ರವಣ ಪರೀಕ್ಷೆ

OIP
Published on

ಮಡಿಕೇರಿ: ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ನಗರದ ಕಾವೇರಿ ಹಿಯರಿಂಗ್ ಕ್ಲೀನಿಕ್ ಮತ್ತು ಇನ್ನರ್ ವೀಲ್ ಕ್ಲಬ್ ಸಹಯೋದೊಂದಿಗೆ ಸೆ24 ರಂದು ರಾಜಸೀಟ್ ಸಮೀಪದ ಕಾಫಿ ಕೃಪಾ ಕಟ್ಟಡದಲ್ಲಿ ಉಚಿತ ಶ್ರವಣ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರವಣ ತಜ್ಞ ಡಾ.ಮೋಹನ್ ಅಪ್ಪಾಜಿ ತಿಳಿಸಿದರು.


ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಜಿಲ್ಲೆಯ ಜನರು ಇದರ ಸೌಲಭ್ಯ ಪಡೆಯಬಹುದಾಗಿದೆ. ಶ್ರವಣದ ಸಮಸ್ಯೆಗಳಿದ್ದಲ್ಲಿ ಹೆಸರಾಂತ ತಜ್ಞರಿಂದ ಪರೀಕ್ಷಿಸಿಕೊಳ್ಳಬಹುದು. ಇದೇ ಸಂದರ್ಭ 40 ವರ್ಷ ಮೇಲ್ಪಟ್ಟವರಿಗೆ ಉಚಿತ ಹೈಪರ್ಟೆನ್ಶನ್ ಮತ್ತು ಡಯಾಬಿಟಿಕ್ ಸ್ಕ್ರೀನಿಂಗ್ ಕ್ಯಾಂಪ್‌ನ್ನು ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಮೊಬೈಲ್: 8792874030, 08272-221460 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕಾವೇರಿ ಹಿಯರಿಂಗ್ ಕ್ಲಿನಿಕ್ ಆಡಿಯೋಲಜಿಸ್ಟ್ ಡಾ. ಎಂ.ಎ.ಅಚ್ಚಯ್ಯ, ಮಡಿಕೇರಿ ತಾಲೂಕಿನ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಶಫಾಲಿ ರೈ, ಕಾರ್ಯದರ್ಶಿ ಶಮಿಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net