

ಸಿಂಧನೂರು: ನಗರದ ಸ್ತ್ರೀಶಕ್ತಿ ಭವನದಲ್ಲಿ ಭಾನುವಾರ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಸೇವಾ ಸಪ್ತಾಹ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ 95ಕ್ಕೂ ಹೆಚ್ಚು ಜನರಿಗೆ ಬಿಪಿ ಮತ್ತು ಶುಗರ್ ಸೇರಿದಂತೆ ಇತರ ಆರೋಗ್ಯ ತಪಾಸಣೆ ನಡೆಸಲಾಯಿತು.
ನೇತ್ರ ತಜ್ಞ ಚನ್ನಗೌಡ ಪಾಟೀಲ್, ಡಾ. ಶರಣಬಸವ ದೇವರೆಡ್ಡಿ, ಬಜರಂಗದಳ ಜಿಲ್ಲಾ ಸಂಚಾಲಕ ಬಸವರಾಜ ಸಾಲಗುಂದಾ, ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ನಾಗೇಶ ಪವಾರ್, ನಗರ ಸಂಚಾಲಕರಾದ ಮೋಹನ್, ಉದಯಕುಮಾರ, ಅಕ್ಷಯಗೌಡ, ರವಿಕುಮಾರ, ರುದ್ರಯ್ಯ ಹಿರೇಮಠ, ದೇವರಾಜ ಜಿನ್ನೂರು, ವೀರೇಶ ಜೀನೂರು, ವಿಜಯಕುಮಾರ, ಆನಂದ, ರಮೇಶ, ಶ್ರೀನಿವಾಸ, ಮನೋಜ, ಹನುಮೇಶ ಉಪ್ಪಾರ್ ಇತರರಿದ್ದರು.