ಉಚಿತ ತಪಾಸಣೆ ಚಿಕಿತ್ಸಾ ಶಿಬಿರ

Ull_Health Checkup
Published on

ಉಳ್ಳಾಲ: ತಲಪಾಡಿ ದೇವಿನಗರ ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ ಸೋಮವಾರ ನಡೆಯಿತು.

ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್ ನೇತೃತ್ವದಲ್ಲಿ ನಡೆದ ಶಿಬಿರ ಶಲ್ಯ ತಂತ್ರ ವಿಭಾಗ ಮುಖ್ಯಸ್ಥ ಡಾ.ಸಂತೋಷ್ ಕುಮಾರ್ ಜೆ ಉದ್ಘಾಟಿಸಿದರು.

ಆಯುರ್ವೇದ ತಜ್ಞೆ ಡಾ.ಅಶ್ವಿನಿ ಮರಾಠೆ, ಡಾ.ದೀಪ ದೇವರಾಜನ್, ಡಾ.ಅರ್ಚನಾ ಎ.ವಿ., ಡಾ.ಸಹನಾ ಜಿ. ಉಪಸ್ಥಿತರಿದ್ದರು.

ಪ್ರಸೂತಿ ತಂತ್ರ ಸ್ತ್ರೀರೋಗ ವಿಭಾಗ, ಶಲ್ಯ ತಂತ್ರ ವಿಭಾಗದ ವತಿಯಿಂದ ನ.9ರ ವರೆಗೆ ಶಿಬಿರ ಆಯೋಜಿಸಲಾಗಿದ್ದು, ಬಿಳಿ ಮುಟ್ಟು, ಬಿಳಿ ಸೆರಗು, ಉರಿಮೂತ್ರ ಸಂಬಂಧಿ ಸಮಸ್ಯೆ, ಉಬ್ಬಿದ ಕಲ್ಲಿನ ರಕ್ತನಾಳಗಳು(ವೆರಿಕೋಸ್ ವೇನ್ಸ್), ವೆರಿಕೋಸ್ ಅಲ್ಸರ್ ಇವುಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆ 8971153232 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net