ಸೋಮವಾರಪೇಟೆ: ಕುಸುಬೂರು ಕೆಂಚಮ್ಮನಬಾಣೆ ಭಾರತ್ ಮಾತಾ ಸೇವಾ ಸಂಘ, ಬೆಂಗಳೂರಿನ ಆಸ್ಟರ್ ಆರ್.ವಿ.ಆಸ್ಪತ್ರೆ ವತಿಯಿಂದ 76ನೇ ಗಣರಾಜ್ಯೋತ್ಸವ ಅಂಗವಾಗಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಜ.27ರ ಸೋಮವಾರ ಕೆಂಚಮ್ಮನ ಬಾಣೆಯ ಕಾವೇರಿ ಸಮುದಾಯ ಭವನದಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಶಾಸಕ ಡಾ.ಮಂತರ್‌ಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್, ತಜ್ಞ ಡಾ.ವೇಣುಗೋಪಾಲ, ಡಾ.ಪ್ರತಾಪ್, ಪಿಕಾರ್ಡ್ ಅಧ್ಯಕ್ಷ ಬಿ.ಬಿ.ಸತೀಶ್,ಬೇಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ.ಸುದರ್ಶನ್, ಪ್ರಮುಖರಾದ ಕೆ.ಭಾಸ್ಕರ್, ಕೆ.ಪಿ.ಸೋಮಶೇಖರ್, ಸುಮಂತ್ ಇದ್ದರು.