

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನ ನಿಮಿತ್ತ ವೈದ್ಯರತ್ನಮ್ ಔಷಧಾಲಯ ವತಿಯಿಂದ ಇಲ್ಲಿಯ ವಿದ್ಯಾನಗರದ ಶಿರೂರ ಪಾರ್ಕ್ ಓಂ ಅನೆಕ್ಸ್‌ನ ನೆಲಮಹಡಿಯ ವೈದ್ಯರತ್ನಮ್ ಔಷಧಾಲಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾ. 16ರಂದು ಏರ್ಪಾಟಾಗಿದೆ.
ಬಿಳಿ ಮುಟ್ಟು, ಪಿಸಿಒಡಿ, ರಜೋನಿವೃತ್ತಿ ಸಂಬಂಧಿತ ಕಾಯಿಲೆ, ಬಂಜೆತನ ಹಾಗೂ ಗರ್ಭಧಾರಣೆಗೆ ಸೂಕ್ತ ಸಲಹೆ ನೀಡಲಾಗುವುದು. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಶಿಬಿರ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.