ಜು.10 ರಂದು ಉಚಿತ ಆರೋಗ್ಯ ತಪಾಸಣೆ

DR AJIT V KULAKARNI
DR AJIT V KULAKARNI
Published on

ರಾಯಚೂರು ನಗರದ ವಿಜಯಪಾಲಿ ಕ್ಲೀನಿಕ್ ಮತ್ತು ನರ್ಸಿಂಗ್ ಹೋಂ ದಶಮಾನೋತ್ಸವ ಹಾಗೂ ವೈಧ್ಯರ ದಿನಾಚರಣೆ ನಿಮಿತ್ತ ಜು.10 ರಂದು ಉಚಿತ ಆರೋಗ್ತ ತಪಾಸಣಾ ಶಿಬಿರ ಆಯೋಜಿಸಲಾಗಿದೆಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಅಜೀತ್ ಕುಲಕರ್ಣಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನುಷ್ಯನ ಜೀವನಶೈಲಿ, ಮಧುಮೇಹ, ರಕ್ತದೊತ್ತಡ, ಅನುವಂಶಿಯತೆ ಕಾರಣಗಳಿಂದ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಮುನ್ನಚ್ಚರಿಕೆಯಿಂದಾಗಿ ನಿಯಂತ್ರಿಸಬಹುದಾಗಿದೆ.

ನಿರಂತರವಾಗಿ ತಪಾಸಣೆಗೆ ಒಳಗಾಗಿ ಪರೀಕ್ಷೆ ಮಾಡಿಕೊಳ್ಳುವದು ಅಗತ್ಯವಾಗಿದೆ. ಕಳೆದ 9 ವರ್ಷಗಳಿಂದ ಜಿಲ್ಲೆಯ ಜನರಿಗೆ ಹೃದಯ ಸಂಬಂಧಿ ಚಿಕಿತ್ಸೆ ಆಸ್ಪತ್ರೆ ನೀಡುತ್ತಾ ಬಂದಿದೆ. ಎಂಜಿಯೋಗ್ರಾಂ, ಮಧುಮೇಹ,ರಕ್ತದೊತ್ತಡ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೇ ಹೃದಯಾಘಾತ ನಡೆಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಎಲ್ಲ ವಯಸ್ಸಿನವರು ಆರು ತಿಂಗಳಿಗೆ ಒಮ್ಮೆಯಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಾರಣ ಉಚಿತವಾಗಿ ನಡೆಯಲಿರುವ ಶಿಬಿರದ ಸದುಪಯೋಗ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಅಮರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net