22ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

health
Published on

ಮೈಸೂರು: ವಿ.ಆರ್.ಟ್ರಸ್ಟ್ ವತಿಯಿಂದ ಜ.22ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಗರದ ಆಲಮ್ಮ ಛತ್ರದಲ್ಲಿನ ಕುಂಚಿಟಿಗರ ಸಂಘದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಶುಶ್ರುತಗೌಡ ತಿಳಿಸಿದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಸಲಹೆ ದೊರೆಯಲಿದೆ. ಅಲ್ಲದೆ, ಶಿಬಿರದಲ್ಲಿ ಪಾಲ್ಗೊಂಡವರ ಆರೋಗ್ಯದ ಮೇಲೆ ವರ್ಷ ಪೂರ್ತಿ ನಿಗಾ ಇರಿಸಿ ಸಲಹೆ ಸೂಚನೆ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದೇ ಅದೇ ಸ್ಥಳದಲ್ಲಿ ಅಯೋಧ್ಯಯಲ್ಲಿನ ಶ್ರೀರಾಮ ಮಂದಿರದಲ್ಲಿನ ವಿಗ್ರಹ ಪ್ರತಿಷ್ಠಾಪನೆ ದೃಶ್ಯವನ್ನು ಬೃಹತ್ ಎಲ್‌ಇಡಿ ಟಿವಿ ಮೂಲಕ ನೇರ ಪ್ರಸಾರ ಮಾಡಲಾಗುವುದು. ಜತೆಗೆ ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಸಂಘದ ಸಹಯೋಗದಲ್ಲಿ ಶ್ರೀರಾಮ ತಾರಕ ಹೋಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಿರಿಯ ಕಾಂಗ್ರೆಸ್ ಮುಖಂಡ ವಿಷ್ಣುಪ್ರಿಯ, ಮಾದೇಗೌಡ, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net