ಮೊಬೈಲ್ ಬಳಕೆಯಿಂದ ಬೆಳವಣಿಗೆ ಕುಂಠಿತ: ಮಕ್ಕಳ ತಜ್ಞ ಡಾ.ಮಂಜುನಾಥ ಹೇಳಿಕೆ

Free health checkup camp for school children mandya
Published on

ಮಂಡ್ಯ: ವಿಭಕ್ತ ಕುಟುಂಬಗಳು ಹೆಚ್ಚಾಗಿ ಮಕ್ಕಳು ಆಟವಾಡುವುದನ್ನು ಮರೆಯುತ್ತಿದ್ದಾರೆ. ಬದಲಿಗೆ ಮೊಬೈಲ್ ಹಾಗೂ ಟಿ.ವಿ ವೀಕ್ಷಣೆ ಹೆಚ್ಚಾಗುತ್ತಿದೆ. ಪರಿಣಾಮ ಮಾತು ಕಲಿಯುವ ವಯಸ್ಸಿನಲ್ಲಿ ಮೂಕರಾಗುವ ಸನ್ನಿವೇಶಗಳನ್ನು ಪಾಲಕರೇ ಸೃಷ್ಟಿಸುತ್ತಿದ್ದಾರೆ ಎಂದು ಮಕ್ಕಳ ತಜ್ಞ ಡಾ.ಮಂಜುನಾಥ ಹೇಳಿದರು.

ನಗರದ ಹೊಸಹಳ್ಳಿ ಬಡಾವಣೆಯ ಮಹಾಮಾಯ ಪ್ರೈಮರಿ ಶಾಲೆಯ ಆವರಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಮಕ್ಕಳ ಮಾನಸಿಕ ಸಮತೋಲದ ಬಗ್ಗೆ ಪಾಲಕರು ಆಸಕ್ತಿ ವಹಿಸುತ್ತಿಲ್ಲ. ಅಳುವಾಗ ಮೊಬೈಲ್ ತೋರಿಸುವುದು ಅಥವಾ ಅವರ ಕೈಗೆ ನೀಡುವುದು ತುಂಬಾ ಅಪಾಯಕಾರಿ. ಮೊಬೈಲ್ ಬಳಿಕೆಯಿಂದ ಅವರ ಮಿದುಳಿನ ಮೇಲೆ ಬಾರಿ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಮಾನಸಿಕ ಬೆಳೆವಣಿಗೆ ಕುಂದುತ್ತದೆ. ಆಟವಾಡುವುದನ್ನು ಮರೆತು ಕುಳಿತಲ್ಲೇ ಕೂರತ್ತವೆ ಎಂದು ಸಲಹೆ ನೀಡಿದರು.

ಶಿಬಿರವನ್ನು ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ ಉದ್ಘಾಟಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹಾದೇವ, ಮಹಾಮಾಯ ಪ್ರೈಮರಿ ಶಾಲೆಯ ಅಧ್ಯಕ್ಷೆ ಗೀತಾ ಕಾಮತ್, ವೈದ್ಯ ಡಾ.ಎಚ್.ಸಿ.ಆನಂದ್, ರಾಮಚಂದ್ರ, ಮಳವಳ್ಳಿ ನಾಗರಾಜ್, ಮಂಜುಳಾ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net