

ರಾಯಬಾಗ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ಹದಯ ರೋಗ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಅತಿ ಅವಶ್ಯ ಎಂದು ಡಾ.ವರ್ಷಾ ವಿವೇಕರಾವ ಪಾಟೀಲ ಹೇಳಿದರು.
ಪಟ್ಟಣದ ವಿವೇಕಾನಂದ ಕನ್ನಡ ಶಾಲೆಯ ಆವರಣದಲ್ಲಿ ಅಂಕಲಿಯ ಆದರ್ಶ ಮಲ್ಟಿ ಸ್ಪೇಷಲಿಸ್ಟ್ ಆಸ್ಪತ್ರೆ ಹಾಗೂ ರಾಯಬಾಗ ಅಭಾಜಿ ೌಂಡೇಷನ್ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ದೊಡ್ಡ ಕಾಯಿಲೆಗಳಿಗೆ ಖರ್ಚು ಮಾಡುವಷ್ಟು ಬಡವರು ಶಕ್ತರಾಗಿರುವುದಿಲ್ಲ. ಆದ್ದರಿಂದ ಇಂಥ ಉಚಿತ ಆರೋಗ್ಯ ಮೇಳಗಳಲ್ಲಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡರೆ ಬೇಗನೇ ಗುಣಮುಖರಾಗಲು ಸಾಧ್ಯ ಎಂದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತಿರುವ ಬಂಜೆತನಕ್ಕೆ ಹೆದರುವ ಅವಶ್ಯಕತೆ ಇಲ್ಲ. ವೈಜ್ಞಾನಿಕತೆ ಸಾಕಷ್ಟು ಮುಂದುವರಿದಿದ್ದು, ಔಷಧೋಪಚಾರದಿಂದ ಗುಣವಾಗಬಹುದು ಎಂದರು.
ಆದರ್ಶ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ಎಂಡಿ ಡಾ.ದಯಾನಂದ ಕೋರೆ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಹುಲ ಬಂತೆ, ಡಾ.ಐ.ಐ. ಮುಲ್ಲಾ, ಡಾ.ವೈ.ಎಸ್. ಬಂತೆ ಆರೋಗ್ಯ ತಪಾಸಣೆ ನಡೆಸಿದರು. ಆದರ್ಶ ಆಸ್ಪತ್ರೆಯ ಡಾ.ಆದರ್ಶ ವಸವಾಡೆ, ಡಾ.ಸೋನಾಲಿ ವಸವಾಡೆ, ಡಾ.ಪುರುಷೋತ್ತಮ ಹೂಗಾರ, ಡಾ.ಮಹೇಶ ಮನಗೂಳಿ ಹಾಗೂ ಅಭಾಜಿ ೌಂಡೇಶನ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.