

ಮೈಸೂರು: ಗಾಂಧಿನಗರದ ಶ್ರೀರಾಮಮಂದಿರದಲ್ಲಿ ಇತ್ತೀಚೆಗೆ ಮೇಘನಾ ಫೌಂಡೇಷನ್, ಜಯನಗರ ಸಮುದಾಯ ಆರೋಗ್ಯ ಕೇಂದ್ರ, ಗಾಂಧಿನಗರ ಶ್ರೀರಾಮ ಮಂದಿರ, ಆದಿಜಾಂಬವ ಅಭಿವೃದ್ಧಿ ಸಮಿತಿ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ವೈದ್ಯರಾದ ಡಾ. ಪ್ರಹ್ಲಾದರಾವ್, ಡಾ.ಎ.ಎನ್. ಭಟ್, ಮೇಘನಾ ಫೌಂಡೇಷನ್ ಮುಖ್ಯಸ್ಥ ಸಿ. ಲಿಂಗರಾಜು, ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಸಮಲೋಚಕಿ ಪಿ. ಶ್ವೇತಾರಾಣಿ, ಹಿರಿಯ ಶುಶ್ರೂಷಕಿ ಸ್ವರ್ಣಲತಾ ಹಾಗೂ ಇತರರು ಇದ್ದರು.