

ವಿರಾಜಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ವಿರಾಜಪೇಟೆ ತಾಲೂಕು ಕಾನೂರು ವಲಯ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕುಟ್ಟ ಹಾಗೂ ಪೂಜೆಕಲ್ಲು ಕಾರ್ಯಕ್ಷೇತ್ರದಲ್ಲಿ ಬುಧವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ವೈದ್ಯರಾದ ಡಾ.ಅರ್ಚನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೈನಂದಿನ ದಿನದಲ್ಲಿ ನಾವು ಉತ್ತಮ ಆರೋಗ್ಯವನ್ನು ಹೇಗೆ ಕಾಪಾಡಬೇಕು, ಯೋಗದಿಂದ ಆಗುವ ಉಪಯೋಗಗಳು, ಕ್ಯಾನ್ಸರ್ ಯಾವ ರೀತಿ ಬರುತ್ತದೆ ಹಾಗೂ ಬಾರದ ಹಾಗೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು? ಡೆಂೆ ಜ್ವರ ನಿಯಂತ್ರಣ ಹಾಗೂ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಹೇಗಿರಬೇಕು? ಎಂಬುದರ ಬಗ್ಗೆ ಮಾಹಿತಿ ಒದಗಿಸಿ ಜಾಗೃತಿ ಮೂಡಿಸಿದರು.
ಕಾನೂರು ಪ್ರಾಥಮಿಕ ಕೇಂದ್ರದ ಡಾ.ಶರತ್ ಮಾತನಾಡಿ, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು, ಶುಗರ್, ರಕ್ತಹೀನತೆ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಹೇಗೆ ಉಂಟಾಗುತ್ತದೆ ಹಾಗೂ ಇದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಸಿದರು.
ಕುಟ್ಟ ಒಕ್ಕೂಟ ಅಧ್ಯಕ್ಷೆ ಸುನಂದಾಮಣಿ ಅಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕರಾದ ಸುಜೀರ್, ಪೂಜೆಕಲ್ಲು ಸೇವಾ ಪ್ರತಿನಿಧಿ ಹೇಮಲತಾ, ಕುಟ್ಟ ಸೇವಾ ಪ್ರತಿನಿಧಿ ಸ್ವಪ್ನ, ಪೂಜೆಕಲ್ಲು ಒಕ್ಕೂಟದ ಅಧ್ಯಕ್ಷ ರಾಜೇಶ್ ಸೇರಿದಂತೆ ಜ್ಞಾನಜ್ಯೋತಿ ಹಾಗೂ ಭದ್ರ 2 ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು, ತಾಲೂಕು ಆರೋಗ್ಯ ಕೇಂದ್ರ ಗೋಣಿಕೊಪ್ಪ ಇಲ್ಲಿನ ಸಿಬ್ಬಂದಿ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.