

ಬೆಳಗಾವಿ: ಕೆ.ಎಲ್.ಇ. ಶಹಾಪುರ ಆಯುರ್ವೇದ ಆಸ್ಪತ್ರೆಯಲ್ಲಿ ಸೆ.26ರಂದು ಬೆಳಗ್ಗೆ 9ರಿಂದ 1.30 ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಸೆಪ್ಟೆಂಬರ್ ತಿಂಗಳ ವಿಶೇಷ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಮದುಮೇಹಜನ್ಯ ಗಾಯಗಳು, ಆರ್ಟರಿಯಲ್ ಅಲ್ಸರ್, ವೆರಿಕೋಸ್ ಅಲ್ಸರ್, ಶಸ್ತ್ರಚಿಕಿತ್ಸೆಯ ನಂತರದ ವಾಸಿಯಾಗದ, ಮಾಯಲಾರದ ಗಾಯಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಗುವುದು. ಬಾಗಲಕೋಟೆಯ ಬಿವಿವಿಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಖ್ಯಾತ ವೈದ್ಯರಾದ ಡಾ. ಪಲ್ಲವಿ ಹೆಗಡೆ ಅವರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡುವರು. ಸಾರ್ವಜನಿಕರು ಶಿಬಿರದ ಲಾಭ ಪಡೆಯಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.