

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಜನ್ಮದಿನದ ಅಂಗವಾಗಿ ತಾಲೂಕಿನ ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹುಬ್ಬಳ್ಳಿಯ ಲಯನ್ಸ್ ಕ್ಲಬ್, ಸೆಕ್ಯೂರ್ ಆಸ್ಪತ್ರೆ, ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಮತ್ತು ಟೀಂ ಆಪತ್ಬಾಂಧವ ಆಶ್ರಯದಲ್ಲಿ ಸೆ. 21ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ತಜ್ಞ ವೈದ್ಯರು ಹೃದಯ ರೋಗ, ನೇತ್ರ ತಪಾಸಣೆ, ಕಿವಿ, ಮೂಗು, ಚರ್ಮರೋಗ, ಕೀಲು ಮೂಳೆ, ಸ್ತ್ರೀರೋಗ, ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳುವರು. ರಕ್ತಪರೀಕ್ಷೆ, ಶುಗರ್, ಇಸಿಜಿ, ಇಕೋ, ಮೂಳೆ ಸಾಂದ್ರತೆ ಪರೀಕ್ಷೆ ಉಚಿತವಾಗಿ ಕೈಗೊಳ್ಳಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು. ತಾಲೂಕಿನ ಜನತೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಕೋರಿದ್ದಾರೆ.