

ಶಿವಮೊಗ್ಗ: ಶಿವಮೊಗ್ಗ ದಸರಾ 2023ರ ಯೋಗ ದಸರಾ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಸೇರಿ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಅ.22ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷೆ ಕಲ್ಪನಾ ರಮೇಶ್ ತಿಳಿಸಿದರು.
ಅಂದು ಬೆಳಗ್ಗೆ 5.30ಕ್ಕೆ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಆರಂಭವಾಗುತ್ತದೆ. 6.45ರಿಂದ 7ರವರೆಗೆ ದ ಆರ್ಟ್ ಆ್ ಲಿವಿಂಗ್ ನೇತೃತ್ವದಲ್ಲಿ ಧ್ಯಾನ ನಡೆಯುತ್ತದೆ. ನಂತರ ಸಭಾ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾವಯವ ಕೃಷಿಕ ಆಹಾರ ತಜ್ಞ ಆ.ಶ್ರೀ ಆನಂದ್ ಅವರಿಂದ ಆರೋಗ್ಯ, ಆಹಾರ, ಆನಂದ ಕುರಿತು ಉಪನ್ಯಾಸ, ವಿಶೇಷ ಯೋಗ ನೃತ್ಯ,ಯೋಗ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿವೆ. ಇಂಡಿಯನ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂದು ಬೆಳಗ್ಗೆ 5.30ರಿಂದ 9ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ರಿಯಾಯಿತಿ ದರದಲ್ಲಿ ವಿವಿಧ ಚಿಕಿತ್ಸೆ ಮತ್ತು ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ ಇರುತ್ತದೆ ಎಂದರು.