ಉಚಿತ ಆರೋಗ್ಯ ತಪಾಸಣೆ

New PM 1 New
Published on

ಹುಬ್ಬಳ್ಳಿ : ಡಾ. ಬಿ.ಆರ್. ಅಂಬೇಡ್ಕರ ಹಾಗೂ ಬಸವ ಜಯಂತಿ ಅಂಗವಾಗಿ ಇಲ್ಲಿನ ಶ್ರೇಯಾ ಜನ ಸೇವಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏ. 14ರಿಂದ 30ರವರೆಗೆ ಇಲ್ಲಿನ ಕ್ಲಬ್ ರಸ್ತೆ ಬೆಳಮಕರ ಕಾಂಪ್ಲೆಕ್ಸ್ 1ನೇ ಮಹಡಿಯ ಟ್ರೖೆಡೆಂಟ್ ಡೈಗ್ನೋಸ್ಟಿಕ್ಸ್ ಹೆಲ್ತಕೇರ್​ನಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ರಾಜ್ಯಾಧ್ಯಕ್ಷ ವಿ.ಜಿ. ಪಾಟೀಲ, ಮಧುಮೇಹ, ರಕ್ತದೊತ್ತಡ, ದೇಹದಲ್ಲಿನ ಕೊಬ್ಬಿಂಶಗಳ ಕುರಿತು ಉಚಿತ ತಪಾಸಣೆ ಮಾಡಲಾಗುವುದು ಎಂದರು.

ಎಚ್​ಬಿ1ಸಿ, ಥೈರಾಯಡ್ ಪ್ರೊಫೈಲ್, ಲಿಪಿಡ್ ಪ್ರೊಫೈಲ್, ವಿಟಮಿನ್ ಡಿ, ವಿಟಮಿನ್ ಬಿ 12ಗಳ ಕುರಿತು ಹಿರಿಯ ನಾಗರಿಕರು ಹಾಗೂ ಬಡವರಿಗೆ ರಿಯಾಯಿತಿ ದರದಲ್ಲಿ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.

ಟ್ರಸ್ಟ್ ಗೌರವ ಅಧ್ಯಕ್ಷ ಶಾಂತಣ್ಣ ಕಡಿವಾಲ, ಸಂತೋಷ ಶೆಟ್ಟಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net