ಧಾರವಾಡ: ಸತ್ತೂರಿನ ಸತ್ಯ ಸಾಯಿ ಹೋಮಿಯೋಪತಿ ಆಸ್ಪತ್ರೆ ಮತ್ತು ಶರಣಪ್ಪ ಕೊಟಗಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಸ್ಪತ್ರೆಯಲ್ಲಿ ವರ್ಷಪೂರ್ತಿ ಉಚಿತ ಆರೋಗ್ಯ ತಪಾಸಣೆ ನಡೆ, ಔಷಧ ವಿತರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಶರಣಪ್ಪ ಕೊಟಗಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಆ. 1ರಿಂದ ಶಿಬಿರ ಆರಂಭವಾಗಿದೆ. ಶಿಬಿರದಲ್ಲಿ ಪ್ರತಿದಿನ 150ಕ್ಕೂ ಹೆಚ್ಚು ಹೋರ ರೋಗಿಗಳಿಗೆ ಆರೋಗ್ಯ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಎಲುಬು-ಕೀಲು ತಪಾಸಣೆ, ಚರ್ಮರೋಗ, ಅಸ್ತಮಾ, ಮೂತ್ರಪಿಂಡದ ಕಲ್ಲು ತಪಾಸಣೆ, ಪಿತ್ತಕೋಶ ಸಮಸ್ಯೆ, ಮದುಮೇಹ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಹೆಬ್ಬಳ್ಳಿ, ನಿಗದಿ, ದೇವರ ಹುಬ್ಬಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಟ್ರಸ್ಟ್ ಸದಸ್ಯ ನಾಗರಾಜ ಕೊಟಗಿ, ಡಾ.ಕಿರಣ ಸಾಣಿಕೊಪ್ಪ, ಡಾ.ಸರೋಜಿನಿ ದೇಸಾಯಿ, ಡಾ.ಮಹಾತೇಶ ಕುಬಸದ, ಪ್ರದೀಪ ಕಮ್ಮಾರ ಸುದ್ದಿಗೋಷ್ಠಿಯಲ್ಲಿದ್ದರು.