6 ರಂದು ಆರೋಗ್ಯ ಉಚಿತ ತಪಾಸಣೆ

Free health check-up on the 6th
Published on

ದೇವರಹಿಪ್ಪರಗಿ (ಗ್ರಾಮೀಣ): ಸಮೀಪದ ಪಡಗಾನೂರದ ಶ್ರೀ ಸೋಮೇಶ್ವರ ಜಾತ್ರೆ ನಿಮಿತ್ತ ವಿಜಯಪುರದ ಅನುಗ್ರಹ ವಿಜನ್ ಫೌಂಡೇಷನ್ ಟ್ರಸ್ಟ್ ಹಾಗೂ ಶ್ರೇಯಾ ಆಸ್ಪತ್ರೆ ಸಹಯೋಗದಲ್ಲಿ ಏ.6 ರಂದು ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ನಡೆಯಲಿದ್ದು, ಡಾ. ಪ್ರಭುಗೌಡ ಲಿಂಗದಳ್ಳಿ, ಡಾ. ಭೀಮನಗೌಡ ಪಾಟೀಲ ನೇತೃತ್ವ ವಹಿಸುವರು.

ಶಿಬಿರದಲ್ಲಿ ಕಣ್ಣು, ಎಲುವು ಮತ್ತು ಕೀಲುಗಳ ಉಚಿತ ತಪಾಸಣೆಯನ್ನು ತಜ್ಞ ವೈದ್ಯರು ತಪಾಸಣೆ ನಡೆಸಿ ಉಚಿತ ಔಷಧ ವಿತರಿಸಲಿದ್ದಾರೆ.

ಅಲ್ಲದೆ, ಸಿಂದಗಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಜಾತ್ರೆ ಕಮಿಟಿ ಅಧ್ಯಕ್ಷ ಅಯ್ಯಪ್ಪ ಸ್ವಾಮಿ, ಸಿಂದಗಿ ಆಯುಷ್ಯ ವೈದ್ಯಾಧಿಕಾರಿ ಡಾ. ಮಹಾಂತೇಶ ಹಿರೇಮಠ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net