

ಕೊಪ್ಪಳ: ನಗರದ ಗವಿಮಠ ರಸ್ತೆಯಲ್ಲಿನ ವಿಘ್ನೇಶ್ವರ ಯುವಕ ಮಿತ್ರ ಮಂಡಳಿ ಹಾಗೂ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ರೆಡ್ಕ್ರಾಸ್ ಸಹಯೋಗದಲ್ಲಿ ಸೋಮವಾರ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಸಲಾಯಿತು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಕೊಪ್ಪಳ ಜನತೆಗೆ ಆರೋಗ್ಯ ಸೇವೆ ಸಿಗುತ್ತಿದೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಮಾತನಾಡಿ, ಆಯುರ್ವೇದ ಪುರಾತನ ಕಾಲದಿಂದಲೂ ತನ್ನ ಬೇರು ಉಳಿಸಿಕೊಂಡು ಬಂದಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯ ಎಂದರು. ಡಾ.ಮಂಜುನಾಥ ಸಜ್ಜನ ಆಯುರ್ವೇದ ಮಹತ್ವ ಕುರಿತು ತಿಳಿಸಿದರು. ವೈದ್ಯರಾದ ಡಾ.ಗವಿ ಪಾಟೀಲ್, ಡಾ.ಪ್ರಭು ನಾಗಲಾಪುರ, ಡಾ.ಲೋಹಿತ ಕಲಾಲ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. 130ಕ್ಕೂ ಹೆಚ್ಚು ಜನರು ಆರೋಗ್ಯ ಪರೀಸಿಕೊಂಡರು.
ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ, ಮಲ್ಲಪ್ಪ ಕವಲೂರು, ಪ್ರಮುಖರಾದ ಶಂಕರಗೌಡ ಹಿರೇಗೌಡರ್, ಶಿವರೆಡ್ಡಿ ಭೂಮಕ್ಕನವರ, ಶಿವಣ್ಣ ಪಾವಲಿ ಶೆಟ್ಟರ್, ಶರಣಪ್ಪ ಸಜ್ಜನ್, ಚಂದ್ರಪ್ಪ ಕವಲೂರು, ಆನಂದ ಹಿರೇಮಠ ಇತರರಿದ್ದರು.