ಉಚಿತ ಆರೋಗ್ಯ ತಪಾಸಣೆ ಶಿಬಿರ ನಾಳೆ

Dr News
Published on

ದಾಂಡೇಲಿ: ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಫೆ. 18ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳಗಾವಿಯ ಕೆಎಲ್​ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಳಿಯಾಳದ ಆರ್​ಸಿಟಿ ಕೇಂದ್ರದ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ನರರೋಗ ಚಿಕಿತ್ಸೆ, ಎಲುಬು ಕೀಲ, ನೇತ್ರ, ಮೂಗು, ಗಂಟಲು ಹಾಗೂ ಹೃದಯ ಕಸಿ ಜೋಡಣೆ, ಯಕೃತ್ ಲಿವರ್, ಮೂತ್ರಪಿಂಡ ಇತರ ರೋಗಗಳ ತಪಾಸಣೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net