

ಮಮದಾಪುರ: ಸಮೀಪದ ಕೊಳವಿ ಗ್ರಾಮದ ಗುಂಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ ಹಾಗೂ ತಾಪಂ, ಗ್ರಾಪಂ
ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನ ಹಾಗೂ ಮನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಪಿಡಿಒ ಸಂಜುಕುಮಾರ ಜೋತಾವರ ಉದ್ಘಾಟಿಸಿದರು.
ತವಗ ಪ್ರಾಥಮಿಕ ಆರೋಗ್ಯಾಧಿಕಾರಿ ಆರ್.ಬಿ. ಬಸಾಪುರ, ಸಮುದಾಯ ವೈದ್ಯಾಧಿಕಾರಿ ಸಂಜು ಹಟ್ಟಿಗೌಡರ, ತಾಲೂಕು ಐಇಸಿ ಶಂಕರ ಗುಜನಟ್ಟಿ, ಬಿಇಟಿ ಪ್ರವೀಣ ಕಟಾವಕರ, ಭಾರತಿ ಪಾತ್ರೂಟ, ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.