9ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

Free health check-up camp on the 9th
Published on

ಜಮಖಂಡಿ: ನಗರದ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿರುವ ನ್ಯಾಮಗೌಡ ಪಾಲಿಕ್ಲಿನಿಕ್‌ನಲ್ಲಿ ಸಾನಿಯಾ ಮೆಡಿಕಲ್, ನ್ಯಾಮಗೌಡ ಪಾಲಿಕ್ಲಿನಿಕ್, ಬಿಎಲ್‌ಡಿಇ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಫೆ.9ರಂದು ಬೆಳಗ್ಗೆ 10ಗಂಟೆಯಿಂದ 3 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಸಾನಿಯಾ ಮೆಡಿಕಲ್‌ನ ಅಯ್ಯೂಬ ದನ್ನೂರ ತಿಳಿಸಿದರು.

ನಗರದ ಕಾನಿಪ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಡಾ. ಸಂಗಮೇಶ ನ್ಯಾಮಗೌಡ ಅವರು ಮಧುಮೇಹ, ರಕ್ತದೊತ್ತಡ, ಮತ್ತು ಹೃದಯರೋಗಗಳಿಗೆ ಚಿಕಿತ್ಸೆ ನೀಡುವರು.

ಡಾ.ಶಿವಲೀಲಾ ನ್ಯಾಮಗೌಡ ಅವರು ಹಲ್ಲು ತಪಾಸಣೆ, ಮೊಡವೆ ಮತ್ತು ಮುಖದ ಮೇಲಿನ ಕಪ್ಪು ಕಲೆಗಳಿಗೆ, ಕೂದಲು ಉದರುವಿಕೆಗೆ ಚಿಕಿತ್ಸೆ ನೀಡುವರು. ಡಾ.ಪವನ ಬಿಳ್ಳೂರ ಹೊಟ್ಟೆ ನೋವು, ಮೂಲವ್ಯಾದಿ, ಅಪೆಂಡಿಕ್ಸ್, ನರಗಳ ಊತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದು, ಡಾ.ಶ್ರೀಶೈಲ ಅಂಜುಟಗಿ ಕೆಮ್ಮು, ದಮ್ಮು, ಉಸಿರಾಟದ ತೊಂದರೆ, ಗೊರಕೆ ಶ್ವಾಸಕೋಶದ ಕಾರ್ಯ ಸಾಮರ್ಥ್ಯವನ್ನು ಪಲ್ಮರಿ ಂಕ್ಷನ್ ಟೆಸ್ಟ್ ಮಾಡಲಿದ್ದಾರೆ.

ಮನೋರೋಗ ಮತ್ತು ದುಶ್ಚಟ ನಿವಾರಣ ತಜ್ಞ ವೈದ್ಯ ಡಾ.ವಿಶ್ವನಾಥ ಆಲಮೇಲ ಅವರು ಅರೆತಲೆನೋವು, ಭಯ ಪಡುವವರಿಗೆ, ದುಶ್ಚಟ, ನೆಗೆಟಿವ್ ವಿಚಾರ ಮಾಡುವವರನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ ಎಂದರು.

ತಪಾಸಣೆ ಜತೆಗೆ ಉಚಿತವಾಗಿ ಔಷಧಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9980561276 ಸಂಪರ್ಕಿಸಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net