ಉಚಿತ ಆರೋಗ್ಯ ತಪಾಸಣೆ ಶಿಬಿರ ಫೆ. 4ರಂದು

Published on

ಹುಬ್ಬಳ್ಳಿ: ಭಾರತೀಯ ಜೈನ್ ಸಂಘಟನೆ ಹಾಗೂ ಕೆಎಲ್ಇ ಆಸ್ಪತ್ರೆ ಸಹಯೋಗದಲ್ಲಿ ಫೆ. 4ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಜಾಗೃತಿ ಅಭಿಯಾನ ಇಲ್ಲಿಯ ಕೋಯಿನ್‌ರಸ್ತೆಯ ಕೆಎಲ್ಇ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ ಎಂದು ಭಾರತೀಯ ಜೈನ್ ಸಂಘಟನೆ ಹುಬ್ಬಳ್ಳಿ ಅಧ್ಯಕ್ಷ ವಿಕ್ರಮ ಜೈನ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ. 200 ಜನರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ. ಉಚಿತ ಔಷಧ ಹಾಗೂ ತಪಾಸಣೆ ನಡೆಯಲಿದೆ. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗುವುದು ಎಂದರು.

ಫಿಜಿಶಿಯನ್, ಶಸ್ತ್ರಚಿಕಿತ್ಸಕರು, ಪ್ರಸೂತಿ ಹಾಗೂ ಸ್ತ್ರೀರೋಗ, ಚಿಕ್ಕ ಮಕ್ಕಳು, ಎಲುಬು ಹಾಗೂ ಕೀಲು, ಕಿವಿ-ಮೂಗು-ಗಂಟಲು, ಕಣ್ಣು, ಚರ್ಮರೋಗ, ಮನೋರೋಗ, ಹೃದಯ ರೋಗ, ಮೂತ್ರ ರೋಗ, ನರ ರೋಗ ತಜ್ಞರು ಭಾಗವಹಿಸಲಿದ್ದಾರೆ ಎಂದರು.

ಕೆಎಲ್ಇ ಜೆಜಿಎಂಎಂಸಿ ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ, ಮಹಾವೀರ ಕೊಠಾರಿ, ಸಂದೀಪ ಬಾಫಣಾ, ಗೌತಮ ಬಾಫಣಾ, ಮುಕೇಶ ಹಿಂಗರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net