ಉದಾಸೀನ ಮಾಡಿದರೆ ಅನಾರೋಗ್ಯ ಸೃಷ್ಠಿ: ಎಸ್.ಡಿ.ಜಯರಾಂ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಾದೇಶ್ ಎಚ್ಚರಿಕೆ

Free health check-up camp Mandya
Published on

ಮಂಡ್ಯ: ಕೋವಿಡ್ ನಂತರದ ದಿನಗಳಿಂದ ಮನುಷ್ಯರಿಗೆ ಆರೋಗ್ಯ ಎಷ್ಟು ಮುಖ್ಯ ಎಂಬುದು ಗೊತ್ತಾಗಿದೆ ಎಂದು ಎಸ್.ಡಿ.ಜಯರಾಂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಾದೇಶ್ ಹೇಳಿದರು.

ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊತ್ತತ್ತಿ ಗ್ರಾಮ ಪಂಚಾಯಿತಿ, ಕಿರಣ ಸ್ಪರ್ಶ ಟ್ರಸ್ಟ್, ಪಿಇಎಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸುರಕ್ಷಾ ನರ್ಸಿಂಗ್ ಹೋಂ ಮಂಡ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೊತ್ತತ್ತಿ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ನಾವು ದೈನಂದಿನ ಜೀವನದಲ್ಲಿ ಗ್ರಾಮೀಣ ಜನತೆ ಆರೋಗ್ಯವನ್ನು ಜಾಗೃತಿಯಿಂದ ನೋಡಿಕೊಳ್ಳಬೇಕು. ಉತ್ತಮ ಆಹಾರ, ಸೊಪ್ಪು, ತರಕಾರಿ ಹೆಚ್ಚು ಸೇವಿಸಿ. ಅನಾರೋಗ್ಯ ಕಂಡ ತಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ಉದಾಸೀನ ಮಾಡಬೇಡಿ ಎಂದು ನುಡಿದರು.

ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಡಾ.ನೀಲಕಂಠ ಮಾತನಾಡಿ, ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣುತ್ತಿವೆ. ಯುವ ಸಮುದಾಯ ನಗರ ಪಟ್ಟಣದತ್ತ ಉದ್ಯೋಗ ಅರಸಿ ಹೋಗಿದ್ದಾರೆ. ಹಳ್ಳಿಗಳ ಅಭಿವೃದ್ದಿ, ಹಿರಿಯರ ಆರೋಗ್ಯ, ಯೋಗಕ್ಷೇಮ ಬೇಕಾಗಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಾವಶ್ಯಕ. ಉದಾಸೀನ ಮಾಡಿದರೆ ದೊಡ್ಡ ಅನಾರೋಗ್ಯ ಸೃಷ್ಠಿಯಾಗುತ್ತದೆ. ವೈದ್ಯರ ಸಲಹೆ, ಮಾರ್ಗದರ್ಶನದಲ್ಲಿ ಅರೋಗ್ಯವನ್ನು ಸುಧಾರಣೆಯಲ್ಲಿ ಇರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕ ಪ್ರೊ.ಮರಿಯಯ್ಯ, ಕೊತ್ತತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಕಿರಣ ಸ್ಪರ್ಶ ಟ್ರಸ್ಟ್ ಅಧ್ಯಕ್ಷ ಸಚ್ಚಿನ್, ಪಣಕನಹಳ್ಳಿ ಗ್ರಾಮದ ಮುಖಂಡ ಚಾಮೇಗೌಡ, ಯುವ ಮುಖಂಡ ಮೊತ್ತಹಳ್ಳಿ ಸಚ್ಚಿನ್ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಮಾದೇಶ್, ಡಾ.ಸರ್ವಮಂಗಳಾ, ಡಾ.ಮಧುನಂದನ್, ಡಾ.ಲಕ್ಷ್ಮೀಶ್, ಡಾ.ಸೌಮ್ಯಾ ಅವರನ್ನು ಸನ್ಮಾನಿಸಿದರು. 500ಕ್ಕೂ ಹೆಚ್ಚು ಜನರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net