ಬನ್ನೂರಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ

ಬನ್ನೂರು ಪಟ್ಟಣದ ಸುಭಾಷ್ ನಗರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಬನ್ನೂರು ಪಟ್ಟಣದ ಸುಭಾಷ್ ನಗರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರ್ಮಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
Published on

ತಿ.ನರಸೀಪುರ: ತಾಲೂಕಿನ ಬನ್ನೂರು ಪಟ್ಟಣದ ಸುಭಾಷ್‌ನಗರದಲ್ಲಿರುವ ಬಾಬೂಜಿ ಸಮುದಾಯ ಭವನದಲ್ಲಿ ಗುರುವಾರ ಕಾರ್ಮಿಕ ಇಲಾಖೆ ಮತ್ತು ಪ್ರಜ್ಞಾವಂತ ಯುವಕರ ಜಾಗೃತಿ ಸಮಿತಿ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನೂರಾರು ಕಾರ್ಮಿಕರು ಶಿಬಿರದ ಪ್ರಯೋಜನ ಪಡೆದರು. ಬಳಿಕ ಔಷಧಗಳನ್ನು ಉಚಿತವಾಗಿ ಪಡೆದರು. ಕಾರ್ಮಿಕ ಆಸ್ಪತ್ರೆ ನುರಿತ ವೈದ್ಯರ ತಂಡ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಿ, ಚಿಕಿತ್ಸೆ ನೀಡಿತು.

ಇಲ್ಲಿನ ಬಹುತೇಕ ಜನರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೂ ಈವರೆಗೂ ಕಾರ್ಮಿಕ ಕಾರ್ಡ್ ಪಡೆದಿರಲಿಲ್ಲ. ಶಿಬಿರದಲ್ಲಿ ನೋಂದಣಿ ಮಾಡಿಕೊಂಡಿದ್ದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯ ಸೌಲಭ್ಯ ಮತ್ತು ಕಾರ್ಮಿಕರ ಕಾರ್ಡ್ ಬಳಕೆಯ ಬಗ್ಗೆ ಮಾಹಿತಿಯನ್ನೂ ನೀಡಲಾಯಿತು.

ಸುಭಾಷ್‌ನಗರದ ಸಿವಿಲ್ ಇಂಜಿನಿಯರ್ ಬಿ.ಎಸ್.ಸುನೀಲ್‌ಕುಮಾರ್, ಮುಖಂಡರಾದ ಲೋಕೇಶ್, ಶಿವಕುಮಾರ್, ಮಾದೇಶ, ಸಿದ್ದರಾಜು, ನಾಗೇಂದ್ರ ಹಾಗೂ ಸುಭಾಷ್ ನಗರ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net