25ರಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ನಗರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಮಾ. 25 ರಿಂದ 29 ರವರೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಕತ್ತು ಮತ್ತು ಭುಜನೋವು, ಭುಜ ಹಿಡಿಯುವುದು, ಭುಜ ಎತ್ತುವಲ್ಲಿ ಅಶಕ್ತ, ಕೀಲುಗಳಲ್ಲಿ ನೋವು, ಹಿಡಿತ, ಊತ ರೋಗ, ಕೀಲು ಮತ್ತು ಸಂಧಿಗಳ ನೋವು ಹಾಗೂ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಸೇರಿದಂತೆ ಹಲವು ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಮಾ. 25 ರಂದು ಝಂಡು ಹೆಲ್ತ್​ಕೇರ್​ ಸಹಯೋಗದಲ್ಲಿ ಮೊದಲು ಬಂದ 100 ಜನರಿಗೆ ವಿಶೇಷವಾಗಿ ಮೂಳೆಗಳ ಸಾಂದ್ರತೆ ಮಾಪನ ಯಂತ್ರದಿಂದ ಉಚಿತ ತಪಾಸಣೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 7975160825 ಮತ್ತು 9513397413ಕ್ಕೆ ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net