ಆರೋಗ್ಯ ಉಚಿತ ತಪಾಸಣೆ ಶಿಬಿರ

23sunti02
ಸುಂಟಿಕೊಪ್ಪದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ ಸೇವಾ ಭಾರತೀಯ ಅಧ್ಯಕ್ಷ ಚಂದ್ರನ್, ತಮ್ಮಪ್ಪ, ಡಾ.ಶಶಾಂಕ್, ಡಾ.ನಾರಾಯಣ್ ಇದ್ದರು.
Published on

ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾನ್‌ಬೈಲ್ ಒಕ್ಕೂಟ, ಶ್ರೀ ತಲಕಾವೇರಿ ಜ್ಞಾನ ವಿಕಾಸ ಕೇಂದ್ರ ಹಾಗೂ ಸೇವಾ ಭಾರತಿ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ತಜ್ಞರು, ಮಧುಮೇಹ, ರಕ್ತದೊತ್ತಡ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ನುರಿತ ತಜ್ಞರಿಂದ ತಪಾಸಣೆ ನಡೆಸಿ ಜೌಷಧಗಳನ್ನು ನೀಡಲಾಯಿತು.

ಸೇವಾ ಭಾರತೀಯ ಅಧ್ಯಕ್ಷ ಚಂದ್ರನ್ ಹಾಗೂ ತಮ್ಮಪ್ಪ ಅವರ ನೇತೃತ್ವದಲ್ಲಿ ಡಾ.ಶಶಾಂಕ್, ಡಾ.ನಾರಾಯಣ್ ತಂಡದವರು ಆಗಮಿಸಿ 100ಕ್ಕೂ ಹೆಚ್ಚು ಜನರು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾನ್‌ಬೈಲ್ ಒಕ್ಕೂಟ ಹಾಗೂ ಶ್ರೀ ತಲಕಾವೇರಿ ಜ್ಞಾನವಿಕಾಸ ಕೇಂದ್ರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net