

ಮಡಿಕೇರಿ: ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಮೂರ್ನಾಡು ಘಟಕ ಹಾಗೂ ಕೊಡಗು ಆಯುರ್ವೇದ ಕೇರ್ ನ ಸಹಯೋಗದಲ್ಲಿ ಕಾಂತೂರು-ಮೂರ್ನಾಡು ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು.
ಘಟಕದ ಅಧ್ಯಕ್ಷ ಚಾರಿಮಂಡ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ತಾಲೂಕು ಪ್ರಮುಖ್ ಸಜೀವ, ಭಜರಂಗದಳದ ಪ್ರಮುಖ್ ಮಂಜುನಾಥ್, ಸಹ ಕಾರ್ಯದರ್ಶಿ ಪ್ರದೀಪ್, ಪ್ರಮುಖರಾದ ಪಂದ್ಯಂಡ ರಮೇಶ್, ಆಯುರ್ವೇದ ಕೇರ್‌ನ ವೈದ್ಯರುಗಳು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.