ಆರೋಗ್ಯ ಉಚಿತ ತಪಾಸಣಾ ಶಿಬಿರ

Free health check-up camp
ಅಮೀನಗಡ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಚೇರ್ಮೆನ ಐ.ಎಸ್. ಲಿಂಗದಾಳ ಮಾತನಾಡಿದರು. ನಿರ್ದೇಶಕರಾದ ಎಸ್.ಜಿ. ಕನ್ನೂರ, ಆರ್.ಕೆ. ಗೌಡರ, ಎಂ.ವಿ. ಹಾದಿಮನಿ, ಏ.ಕೆ. ತಾಳಿಕೋಟಿ ಇದ್ದರು.
Published on

ಅಮೀನಗಡ: ಪಟ್ಟಣದ ಗಚ್ಚಿನಮಠದ ಶ್ರೀ ಶಂಕರ ರಾಜೇಂದ್ರ ಸ್ವಾಮೀಜಿ 52ನೇ ಜನ್ಮದಿನ ಪ್ರಯುಕ್ತ ತಜ್ಞ ವೈದ್ಯರಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಾಗೂ ಔಷಧ ವಿತರಣೆ ಶಿಬಿರ ಆ. 1 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್ ( ಪ್ರೌಢಶಾಲಾ ವಿಭಾಗ ) ಹಾಗೂ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಗಮೇಶ್ವರ ವಿದ್ಯಾವರ್ಧಕ ಸಂಘ ಚೇರ್ಮನ್ ಐ.ಎಸ್. ಲಿಂಗದಾಳ ಹೇಳಿದರು.

ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕನ ಬಳಗ, ಪ್ರಭುಶಂಕರೇಶ್ವರ ಸಾಂಸ್ಕೃತಿಕ ವೇದಿಕೆ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಸಂಶೋಧನಾ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದರು.

ಕನಕಗಿರಿ ಸಂಸ್ಥಾನಮಠದ ಚನ್ನಮಲ್ಲ ಮಹಾಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರಗೇಂದ್ರ ಮಹಾಸ್ವಾಮಿಗಳು, ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಪುರಗಿರಿ ಹಿರೇಮಠದ ಕೈಲಾಸಲಿಂಗ ಶಿವಾಚಾರ್ಯರ ಸ್ವಾಮಿಗಳು, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಸರ್ವ ವಿಜಯ ಸೇವಾ ಸಂಸ್ಥೆ ಅಧ್ಯಕ್ಷ ರಾಜು ಬೋರಾ, ಜಿ.ಪಂ. ಪಂಚಾಯಿತಿ ಮಾಜಿ ಉಪಾಧ್ಯಕ್ಷರು, ಮಾಜಿ ತಾ.ಪಂ. ಅಧ್ಯಕ್ಷರು, ಪ.ಪಂ ಅಧ್ಯಕ್ಷರು, ಪ.ಪಂ ಸದಸ್ಯರು, ಸಂಘದ ನಿರ್ದೇಶಕರು, ಪ್ರಾಚಾರ್ಯರು, ಉಪ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಇತರರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net