ಹೃದಯ ರೋಗದ ಬಗ್ಗೆ ನಿರ್ಲಕ್ಷ ಬೇಡ

29-09-Shiva-6
ರಾಯಚೂರಿನ ವಿಜಿಕೆ ಹಾರ್ಟ್ ಇನ್ಸಿಟ್ಯೂಟ್‌ನಲ್ಲಿ ವಿಶ್ವ ಹೃದಯ ದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರೆ ಉದ್ಘಾಟಿಸಿದರು. ವೈದ್ಯರಾದ ಡಾ.ವಿ.ಜಿ.ಕುಲಕರ್ಣಿ, ಡಾ.ಅಜಿತ್ ಕುಲಕರ್ಣಿ, ಡಾ.ಮಾಧವಿ ಕುಲಕರ್ಣಿ ಇದ್ದರು.
Published on

ರಾಯಚೂರು: ಹೃದಯ ರೋಗದ ಬಗ್ಗೆ ನಿರ್ಲಕ್ಷ ತೋರದೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಇಲ್ಲವಾದರಲ್ಲಿ ಸಾವಿಗೆ ದಾರಿ ಮಾಡಿಕೊಟ್ಟಂತಾಗಲಿದೆ ಎಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಬಸವರಾಪ ಪೀರಾಪುರೆ ಹೇಳಿದರು.
ಸ್ಥಳೀಯ ವಿಜಿಕೆ ಹಾರ್ಟ್ ಇನ್ಸಿಟ್ಯೂಟ್‌ನಲ್ಲಿ ವಿಶ್ವ ಹೃದಯ ದಿನಾಚರಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿಯೂ ಹೃದಯ ರೋಗಕ್ಕೆ ಸಂಬಂಸಿದ ಎಲ್ಲ ರೀತಿಯ ಚಿಕಿತ್ಸೆಗಳು ದೊರೆಯುತ್ತಿದ್ದು, ಜನರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆ ಮುಖ್ಯಸ್ಥ ಡಾ.ಅಜಿತ್ ಕುಲಕರ್ಣಿ ಮಾತನಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿರುವವರಿಗೂ ಹೃದಯ ರೋಗ ಕಂಡು ಬರುತ್ತಿದ್ದು, ಸಕ್ಕರೆ ಕಾಯಿಲೆ, ಬಿಪಿ ಮುಂತಾದ ರೋಗಗಳು ಹೆಚ್ಚಾಗಿತ್ತು ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ 480ಕ್ಕೂ ಜನರಿಗೆ ಉಚಿತವಾಗಿ ಇಸಿಜಿ, ಬಿಪಿ, ಸಕ್ಕರೆ ಕಾಯಿಲೆ, ರಕ್ತ ಪರೀಕ್ಷೆ ಸೇರಿದಂತೆ ಇನ್ನಿತರ ತಪಾಸಣೆಗಳನ್ನು ನಡೆಸಲಾಯಿತು. 250ಕ್ಕೂ ಹೆಚ್ಚು ಜನರಿಗೆ ಇಕೋ ಕಾರ್ಡಿಯಾಗ್ರಾಫಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ವಿ.ಜಿ.ಕುಲಕರ್ಣಿ, ಡಾ.ಮಾಧವಿ ಕುಲಕರ್ಣಿ, ಅಮರೇಶ ಹೊಸಮನಿ, ರಾಜೇಂದ್ರ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net