

ತಿ.ನರಸೀಪುರ: ಕಲಿಯುಗದ ನಡೆದಾಡುವ ದೇವರು ಎಂದು ಪ್ರಸಿದ್ಧರಾಗಿದ್ದ ತ್ರಿವಿಧ ದಾಸೋಹಿ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿಯನ್ನು ಪಟ್ಟಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ವೇಳೆ ಮಹಾಸಭಾ ಹಾಗೂ ಮಹಿಳಾ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಪದಗ್ರಹಣ ನೆರವೇರಿಸಲಾಯಿತು.
ಪಟ್ಟಣದ ಜೆಎಸ್‌ಎಸ್ ಸಭಾಭವನದಲ್ಲಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ಹಾಗೂ ಜೀವಧಾರ ರಕ್ತ ನಿಧಿ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಇನ್ನೂರಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರು. ರಕ್ತದಾನ ಶಿಬಿರದಲ್ಲಿ ಪುರಸಭಾ ಸದಸ್ಯ ಎಸ್.ಕೆ.ಕಿರಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಭುದೇವನಪುರ ರಮೇಶ್, ಕಾನ್‌ಸ್ಟೆಬಲ್ ಮಾಲೇಗೌಡ, ಕೆಂಪಿ, ಗೀತಾ ಸೇರಿದಂತೆ 87 ಜನ ರಕ್ತದಾನ ಮಾಡಿದರು. ಇಬ್ಬರು ಮಹಿಳೆಯರು ಹಾಗೂ ನಿಲಸೋಗೆ ಗ್ರಾಮದ ಯುವಕ ರಾಜೇಶ್ ಕೈಗೆ ಸಿದ್ಧಗಂಗಾ ಶ್ರೀಗಳ ಟ್ಯಾಟೂ ಹಾಕಿಸಿಕೊಂಡು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್ವಿ ಬಸವರಾಜು ಮಾತನಾಡಿ, ನಾಡಿನ ದಾಸೋಹ ಪರಂಪರೆಯನ್ನು ಎಲ್ಲಡೆ ವ್ಯಾಪಿಸುವ ಹಾಗೆ ಮಾಡಿದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯನ್ನು ವಿಶೇಷವಾಗಿ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಹಾಗೂ ದೇಶದಾದ್ಯಂತ ಬಲವಾಗಿ ಸಂಘಟನೆ ಯಾಗಲು ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಬೇಕು. ಈ ದೆಸೆಯಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವವರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಮತ್ತು ಆಸರೆ ಕಲ್ಪಿಸಿದ್ದ ಶಿವಕುಮಾರ ಸ್ವಾಮೀಜಿ ಅವರು ಮಠಮಾನ್ಯಗಳ ಗೌರವವನ್ನು ಉತ್ತುಂಗಕ್ಕೆ ಕೊಂಡೊಯ್ದರು. ಅಂತ ಮಹಾನ್ ತ್ಯಾಗಿಗಳ ಜಯಂತಿಯ ದಿನದಂದು ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಿರುವುದು ಸಮಾಜಮುಖಿ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಮಹಾಸಭಾ ಯುವ ಘಟಕದ ಪದಾಧಿಕಾರಿಗಳು: ಸಮಾರಂಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕಕ್ಕೆ ಕೆ.ಎನ್.ಅಶೋಕ್(ಅಧ್ಯಕ್ಷ) ಸೇರಿದಂತೆ ರವಿ, ನಾಗೇಶ್, ನಿಲಸೋಗೆ ಯೋಗೇಶ್(ಉಪಾಧ್ಯಕ್ಷರು), ರಘು(ಪ್ರ.ಕಾರ್ಯದರ್ಶಿ), ಪ್ರವೀಣ್ ಕುಮಾರ್, ಸಾಗರ್(ಕಾರ್ಯದರ್ಶಿಗಳು), ಶರತ್ ಕುಮಾರ್(ಖಜಾಂಚಿ), ಸುನೀಲ್, ಮಹದೇವಸ್ವಾಮಿ, ಮಹೇಶ್, ಮಹಾಲಿಂಗಸ್ವಾಮಿ, ಮಣಿಕಂಠ, ಮನು, ಸಂತೋಷ್, ನಂದೀಶ್, ನಂದನ್, ನಂಜುಂಡಸ್ವಾಮಿ, ನಿತಿನ್, ಮಹದೇವ ಪ್ರಸಾದ್, ಪೃಥ್ವಿ, ಸಂತೋಷ್, ಶ್ರೀನಾಥ್ ಹಾಗೂ ತೇಜಸ್(ನಿರ್ದೇಶಕರು) ಅವರನ್ನು ಆಯ್ಕೆ ಮಾಡಲಾಯಿತು.
ಮಹಿಳಾ ಘಟಕಕ್ಕೆ ಜಿ.ರೂಪಶ್ರೀ ಪರಮೇಶ್(ಅಧ್ಯಕ್ಷೆ) ಸೇರಿದಂತೆ ಡಿ.ಕೋಮಲಾ ಕುಮಾರಸ್ವಾಮಿ, ಜ್ಯೋತಿ ಪರಮೇಶ್ ಪಟೇಲ್, ಸುಶೀಲಾ ಮಲ್ಲಪ್ಪ(ಉಪಾಧ್ಯಕ್ಷೆಯರು), ಶೋಭಾ ಶಿವಕುಮಾರಸ್ವಾಮಿ(ಪ್ರಧಾನ ಕಾರ್ಯದರ್ಶಿ), ) ಸುಮಿತ್ರಾ ಶ್ರೀಧರ್, ಇಂದ್ರ ಸಿದ್ದಲಿಂಗಸ್ವಾಮಿ, ರಾಜೇಶ್ವರಿ ಶ್ರೀಕಂಠಸ್ವಾಮಿ(ಕಾರ್ಯದರ್ಶಿಗಳು), ತ್ರಿವೇಣಿ ಶಂಕರಪ್ಪ(ಕೋಶಾಧ್ಯಕ್ಷೆ), ಲಾವಣ್ಯವತಿ ನಟರಾಜು, ಶಾರದಾಂಬ ಜಗದೀಶ್, ವಿಜಯಲಕ್ಷ್ಮೀ ಶಿವಣ್ಣ, ಲಲಿತಮ್ಮ ಶಿವಲೀಲಾ, ಶಿವಶಂಕರಮ್ಮ, ಮಲ್ಲಿಕಾ ಬಸವರಾಜು, ಸೌಭಾಗ್ಯ, ನೀಲಾಂಬಿಕೆ, ನಾಗಮಣಿ(ನಿರ್ದೇಶಕಿಯರು) ಅವರುಗಳನ್ನು ಆಯ್ಕೆ ಮಾಡಿ, ಪದಗ್ರಹಣ ನೆರವೇರಿಸಲಾಯಿತು.
ರಾಜಶೇಖರ ಸ್ವಾಮೀಜಿ, ಗುರುಸ್ವಾಮಿ ಸ್ವಾಮೀಜಿ, ಮಲ್ಲಪ್ಪ ಶ್ರೀಗಳು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎನ್.ಮಹದೇವಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಯುವ ಘಟಕದ ಜಿಲ್ಲಾಧ್ಯಕ್ಷ ಅರ್ಜುನ್ ಪಾರ್ಥ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಪಿ.ಧನ್ಯಕುಮಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ವಿ. ಶಿವಶಂಕರ್, ಕಾರ್ಯದರ್ಶಿ ಕಾರ್ ಮಲ್ಲಪ್ಪ, ನಿರ್ದೇಶಕ ಎಸ್.ಬಿ.ಸುಗಂಧರಾಜು, ಕೆ.ಎಂ.ಮಲ್ಲು, ತೊಂಟೇಶ್, ಉದ್ಯಮಿ ಪೆಟ್ರೋಲ್ ಬಂಕ್ ಚಂದ್ರು, ಪಿಎಎಸಿಸಿ ಅಧ್ಯಕ್ಷ ಎಂ. ಕುಮಾರಸ್ವಾಮಿ, ಕಾಡಾ ಮಾಜಿ ನಿರ್ದೇಶಕ ಹಿರಿಯೂರು ವೀರೇಂದ್ರ, ಜಾಗತಿಕ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ, ಬಸವ ಬಳಗದ ಅಧ್ಯಕ್ಷ ಪರಮೇಶ್ ಪಟೇಲ್, ಗ್ರಾಮ ಪಂಚಾಯಿತಿ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಮುಖಂಡರಾದ ಕೆಬ್ಬೆಹುಂಡಿ ಶಿವಕುಮಾರ್, ಸೋಮಶೇಖರ್, ಮುಸುವಿನ ಕೊಪ್ಪಲು ಶಿವರಾಂ, ತೋಂಟೇಶ್, ನಿಲ್ಸೋಗೆ ಪ್ರಸಾದ್, ಕೆಇಬಿ ಸಿದ್ದಲಿಂಗ ಸ್ವಾಮಿ, ಬೆನಕನಹಳ್ಳ ಪ್ರಭುಸ್ವಾಮಿ, ಬಿಳಿಗೆರೆಹುಂಡಿ ಮಹದೇವಸ್ವಾಮಿ, ಬಿ.ಮಂಟೇಲಿಂಗಪ್ಪ, ಸತ್ಯೇಂದ್ರ ಮೂರ್ತಿ, ಪಿಎಸಿಸಿ ಅಧ್ಯಕ್ಷ ಮಲ್ಲಣ್ಣ, ಸಾಲೂರ್ ಸ್ವಾಮಿ, ಎನ್. ಲೋಕೇಶ್, ನೆರಗ್ಯಾತನಹಳ್ಳಿ ಪುಟ್ಟಸ್ವಾಮಿ, ಗುರುಮೂರ್ತಿ, ಪ್ರವೀಣ್, ಚಂದ್ರದರ, ಮಾಯಪ್ಪ ಇತರರು ಇದ್ದರು.