ಶನಿವಾರ ರೆಡ್ ಕ್ರಾಸ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

Health Care
Published on

ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನದ ರೆಡ್ ಕ್ರಾಸ್ ಭವನದಲ್ಲಿ ಪ್ರತಿ ತಿಂಗಳಿನ 4ನೇ ಶನಿವಾರ ನಡೆಯುವ ಉಚಿತ ಕಿರು ಆರೋಗ್ಯ ತಪಾಸಣಾ ಶಿಬಿರವನ್ನು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಸುನಂದಾ ನೇತ್ರಾಲಯ ವತಿಯಿಂದ ನೇತ್ರ ತಪಾಸಣೆಯನ್ನು ಹಾಗೂ ಡಾ.ಕಾವ್ಯಾ ಅವರು ದಂತ ತಪಾಸಣೆಯನ್ನು ಹಾಗೂ ಹಿಮ್ಸ್ ಮೆಡಿಕಲ್ ಸೂಪರಿಂಟೆಂಡೆಂಟ್, ಕಿವಿ, ಮೂಗು, ಗಂಟಲು ತಜ್ಞರಾದ ಡಾ. ರಾಘವೇಂದ್ರ ಪ್ರಸಾದ್ ಅವರು ಕಿವಿ, ಮೂಗು ಮತ್ತು ಗಂಟಲು ಆರೋಗ್ಯ ಸಮಸ್ಯೆಗಳಿಗೆ ಸಲಹೆ ಹಾಗೂ ಚಿಕಿತ್ಸೆಯ ಮಾರ್ಗದರ್ಶನ ಮಾಡುಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ 60 ವರ್ಷ ಒಳಗಿನ ಬಿಪಿಎಲ್ ಕಾರ್ಡ್ದಾರರಿಗೆ (5 ಲಕ್ಷ ರೂ.ವರೆಗಿನ ವಿಮೆ) ಹಾಗೂ ಎಪಿಎಲ್ ನಾಗರಿಕರಿಗೆ (3ಲಕ್ಷ ರೂ.ವರೆಗಿನ ವಿಮೆ) ಉಚಿತವಾಗಿ ಕಾರ್ಡ್‌ಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಹಾಗೇಯೇ ಬಿಪಿಎಲ್, ಎಪಿಎಲ್ ಹೊಂದಿರುವ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ( 5 ಲಕ್ಷ ರೂ.ವರೆಗಿನ ಉಚಿತ ವಿಮೆ) ಕಾರ್ಡ್‌ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ. ಹಾಗೆಯೇ ನೇತ್ರದಾನ ಮಾಡಲು ಇಚ್ಛಿಸುವ ನಾಗರಿಕರು ನೋಂದಣಿ ಮಾಡಿಸುವ ವ್ಯವಸ್ಥೆಯನ್ನು ಕೂಡ ಮಾಡಿಲಾಗಿದೆ. ಈ ಉಚಿತ ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ರೆಡ್‌ಕ್ರಾಸ್ ಸಭಾಪತಿ ಹೆಮ್ಮಿಗೆ ಮೋಹನ್ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: 9449460806, 8073485317 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net