ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಶಿಬಿರ 10ರಂದು

Basavaraj Patil
Published on

ಹುಮನಾಬಾದ್: ಮಾಜಿ ಸಚಿವ ಬಸವರಾಜ ಪಾಟೀಲ್ ೭ನೇ ಪುಣ್ಯಸ್ಮರಣೆ ನಿಮಿತ್ತ ಸಿಂಧನಕೇರಾ ಕ್ರಾಸ್ ಹತ್ತಿರದ ರಾಜರಾಜೇಶ್ವರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ. ಸಂಧಿ ನೋವು, ಕೀಲು, ಕತ್ತು, ಸೊಂಟ ನೋವು, ಪಕ್ಷಾಘಾತ, ನರರೋಗ, ಮಧುಮೇಹ, ರಕ್ತದೊತ್ತಡ, ಥೈರಾಯ್ಡ್, ಸ್ತ್ರೀರೋಗ, ಚರ್ಮರೋಗ, ಅಸ್ತಮಾ, ದಮ್ಮು, ಕೆಮ್ಮು, ಉಬ್ಬಸ, ಡಸ್ಟ್ ಅಲರ್ಜಿ, ಪೈಲ್ಸ್, ಫಿಸ್ತುಲಾ, ಫಿಷರ್, ಎಸಿಡಿಟಿ, ಲಿವರ್ ಸಮಸ್ಯೆ, ಲೈಪೋಮಾ ಸೇರಿ ವಿವಿಧ ರೋಗಗಳಿಗೆ ತಜ್ಞ ವೈದ್ಯರು ಉಚಿತ ಚಿಕಿತ್ಸೆ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ನಾಡಗೌಡ ತಿಳಿಸಿದ್ದಾರೆ. ಮಾಹಿತಿ, ನೋಂದಣಿಗೆ ಡಾ.ರಾಜಶೇಖರ ಗೋರ್ಟೆ (9009402211೯೦೧೯೪ ೦೨೨೧೧), ಸುಭಾಷ ಪೂಜಾರಿ (6362727106) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net