

ಕಲಬುರಗಿ: ಮಾನ್ಯತಾ ಚಾರಿಟೇಬಲ್ ಟ್ರಸ್ಟ್ ನಿಂದ ಆಳಂದ ತಾಲೂಕಿನ ಭಂಗರಗಾ ಗ್ರಾಮದಲ್ಲಿ ಫೆ.2ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಬಿರಾದಾರ ತಿಳಿಸಿದ್ದಾರೆ.
ಬೆಳಗ್ಗೆ 10ರಿಂದ 4ರವರೆಗೆ ಬಸವೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ನಡೆಯಲಿದ್ದು, ಕ್ಯಾನ್ಸರ್, ಕಣ್ಣು, ಹೃದಯ, ಕಿವಿ, ಮೂಗು, ಗಂಟಲು, ಮೂಳೆ, ಹಲ್ಲು, ಸಕ್ಕರೆ ಕಾಯಿಲೆ ಸೇರಿ ವಿವಿಧ ಕಾಯಿಲೆಗಳ ತಪಾಸಣೆ ಮಾಡಲಾಗುವುದು. ಅಲ್ಲದೇ ರಕ್ತದಾನ ಶಿಬಿರ ನಡೆಯಲಿದೆ. ಮಾಹಿತಿಗೆ ಟ್ರಸ್ಟ್ ಅಧ್ಯಕ್ಷೆ ಗೌರಿ ಚಿಚಕೋಟಿ (9731490122), ಉಪಾಧ್ಯಕ್ಷ ರವೀಂದ್ರ ಚಿಚಕೋಟಿ (9663439737), ಬಸವರಾಜ ಬಿರಾದಾರ್ (94480 22209) ಗೆ ಸಂಪರ್ಕಿಸಿ ಎಂದು ಕೋರಿದ್ದಾರೆ.