ಸಿದ್ಧ ಸಿರಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

0901Klb03
Published on

ಚಿಂಚೋಳಿ: ಪಟ್ಟಣದ ಹೊರವಲಯದ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಕಂಪನಿಯ ಕಾರ್ಮಿಕರಿಗೆ ಗುರುವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಸಿ, ಅಗತ್ಯವಿದ್ದವರಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು. ಸಿದ್ಧಸಿರಿ ಸಂಸ್ಥೆಯ ಸಹ ಸಂಸ್ಥೆಯಾದ ವಿಜಯಪುರದ ಜ್ಞಾನಯೋಗಿ ಶ್ರೀ ಸಿz್ದÉÃಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡದಿAದ ಸುಮಾರು ೩೦೦ ಕಾರ್ಮಿಕರಿಗೆ ಬಿಪಿ, ಸಕ್ಕರೆ ಕಾಯಿಲೆ ಸೇರಿ ಇತರ ಎಲ್ಲ ಆರೋಗ್ಯ ತಪಾಸಣೆ ನಡೆಸಲಾಯಿತು. ತಲೆಬೇನೆ, ಡಯಾಬಿಟಿಸ್, ಬಿಪಿ ಮಾತ್ರೆಗಳನ್ನು ವಿತರಿಸಲಾಯಿತು. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ತಪಾಸಣೆ ನಡೆಸಲಾಗಿದೆ ಎಂದು ಆಸ್ಪತ್ರೆ ಸಿಇಒ ಶರಣ ಮಳಖೇಡಕರ್ ತಿಳಿಸಿದರು. ಸಂಸ್ಥೆ ನಿರ್ದೇಶಕ ರಾಮನಗೌಡ ಬ.ಪಾಟೀಲ್ ಯತ್ನಾಳ, ವೈದ್ಯರಾದ ಡಾ.ಸಂತೋಷ ಬಿಟಿ, ಡಾ.ರಾಮಚಂದ್ರ ಸೋನವಾಲೆ, ಡಾ.ಗುರುರಾಜ, ಯೋಗಿಕ ನರರೋಗ ತಜ್ಞ ಡಾ.ಮಯೂರ ಕಾಕು, ಸಿಬ್ಬಂದಿ ಪಾಂಡು, ಅರುಣಕುಮಾರ, ಗೌರಿಶ, ವಿಶ್ವನಾಥ ಇತರರಿದ್ದರು.

ಜಿಲ್ಲಾ ಕೇಂದ್ರದಿಂದ ದೂರ ಇರುವ ಹಿಂದುಳಿದ ಚಿಂಚೋಳಿಯಲ್ಲಿ 100 ಬೆಡ್ ಸಾಮರ್ಥ್ಯದ ಸಿದ್ದಶ್ರೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿದ್ದು, ಒಂದೇ ಸೂರಿನಲ್ಲಿ ಎಲ್ಲ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಈ ಭಾಗದ ಜನರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸುಧಾರಣೆಗೆ ಸಂಸ್ಥೆ ಶ್ರಮಿಸುತ್ತಿದ್ದು, ಆಸ್ಪತ್ರೆ ಕಾರ್ಯಪೂರ್ಣಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು. | ರಾಮನಗೌಡ ಬಿ.ಪಾಟೀಲ್ ಯತ್ನಾಳ ನಿರ್ದೇಶಕ, ಸಿದ್ಧಸಿರಿ ಸಂಸ್ಥೆ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net