

ಕಾಸರಗೋಡು: ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಜರುಗಿತು.
ಕಾಸರಗೋಡಿನ ಹಿರಿಯ ವೈದ್ಯ ಬಿ.ಎಸ್.ರಾವ್ ಶಿಬಿರ ಉದ್ಘಾಟಿಸಿದರು. ವಾಸುದೇವ ಕಾರಂತ ಉಜಿರೆಕೆರೆ, ಎಲುಬು ತ ಡಾ.ಹರಿ ಕಿರಣ ಬಂಗೇರ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಜಗದೀಶ ಕೆ.ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ನೀರಾಳ ವಂದಿಸಿದರು. ಕೆ.ಎಂ.ಸಿ ಆಸ್ಪತ್ರೆ ಅತ್ತಾವರದ ವೈದ್ಯಕಿಯ ಶಿಬಿರದ ಸಂಟಕ ಉದಯ ಭಟ್ ನೇತೃತ್ವ ವಹಿಸಿದ್ದರು. 150ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಪ್ರತಿಷ್ಠಾನದ ಟ್ರಸ್ಟಿ ಸುಮಿತ್ರಾ ಮಯ್ಯ, ಶ್ರೀಮುಖ ಮಯ್ಯ, ಶ್ರೀರಾಜ್ ಮಯ್ಯ, ಶಿವ ನಾರಾಯಣ ವಾಟ್ಸಾಪ್ ಬಳಗದ ಸದಸ್ಯರು ಸಹಕರಿಸಿದರು.